SHARE

ಬೆಳಗಾವಿ:ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ವಿಕೃತ ಮನಸ್ಸಿನ ಜನರಿಂದ ಅಮಾನುಷ ಅತ್ಯಾಚಾರ ಪ್ರಕರಣ ನಡೆಯುತ್ತಿರುವುದು ಅಸಹನೀಯ ಎಂದು ನಗರದ ಮಹಿಳೆಯರು ಖೇದ ವ್ಯಕ್ತಪಡಿಸಿದ್ದಾರೆ.

ನಗರದ ಕಾಕತಿ ಅರಣ್ಯ ಪ್ರದೇಶದಂಚಿನಲ್ಲಿ ನಡೆದ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ನಗರದ ಮಹಿಳೆಯರಿಗೆ ವಿಪರೀತ ಆತಂಕವುಂಟುಮಾಡಿದೆ ಎಂದು ಭಾರತೀಯ ಮಹಿಳೆಯರ ರಾಷ್ಟ್ರೀಯ ಸಂಘಟನೆ(national federation of Indian women)ಹಾಗೂ ಸಮಸ್ತ ಸ್ತ್ರೀ ಸಂಘಟನೆಗಳು ಮನವಿ ಪತ್ರದಲ್ಲಿ ಉಲ್ಲೇಖಿಸಿದೆ. ಇಂದು ಡಿಸಿಪಿ ಜಿ. ರಾಧಿಕಾ ಅವರನ್ನು ಭೇಟಿ ಮಾಡಿ ಮಹಿಳಾ ಮುಖಂಡರು ಚರ್ಚೆ ನಡೆಸಿದರು.

ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ಈ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಗರಿಷ್ಠ ಪ್ರಮಾಣದ ಕಾನೂನು ಕ್ರಮ ಆಗಬೇಕೆಂದು ಒತ್ತಾಯಿಸಿದರು.

ಅತ್ಯಾಚಾರ ಮರುಕಳಿಸದಿರಲಿ:ನಾಗರಿಕರ ಒತ್ತಾಯ

ಬೆಳಗಾವಿ:ಕಾಕತಿ ಅರಣ್ಯ ಪ್ರದೇಶದಲ್ಲಿ ಸೋಮವಾರ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಂಭೀರ ಶಿಕ್ಷೆ ಕೊಡಿಸಿ, ಇಂಥ ಘಟನೆಗಳು ಮರುಕಳಿಸಬಾರದು ಎಂದು ಸರಕಾರವನ್ನು ಆಗ್ರಹಿಸಿ ವಿದ್ಯಾರ್ಥಿಗಳು, ನಾಗರಿಕರು ಗುರುವಾರ ಸಂಜೆ ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಮೂಕ ಪ್ರತಿಭಟನೆ ನಡೆಸಿದರು.