SHARE

ಬೆಳಗಾವಿ: ಮೇಯರ್ ಚುನಾವಣೆಯಲ್ಲಿ ಕನ್ನಡಿಗರಿಗೆ ಆದ ಅನ್ಯಾಯ, ಅವಮಾನ ಹಾಗೂ ಕೀಳು ರಾಜಕೀಯ ಖಂಡಿಸಿ ಇಂದು ಕಸಾಪ ಭವನದಲ್ಲಿ ಕನ್ನಡಪರ ಹಿರಿಯ ಮುಖಂಡರ ಚರ್ಚಾ ಸಭೆ ನಡೆಯಿತು.

ಬೆಳಗಾವಿ ಕನ್ನಡ ಹೋರಾಟ ತೀವೃಗೊಳಿಸಲು ಜಿಲ್ಲಾ ಕನ್ನಡ ಸಾಹಿತ್ಯ ಲೋಕ ತನ್ನ ಬೆಂಬಲ ವ್ಯಕ್ತಪಡಿಸಿತು. ಗುರುವಾರ ಮಾರ್ಚ್ ೯ ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಶಾಮಿಯಾನ ಹಾಕಿ ಬೆಳಿಗ್ಗೆ ೧೦ ರಿಂದ ಸಂಜೆ ೫ರವರೆಗೆ ಧರಣಿ ಸತ್ಯಾಗ್ರಹ ನಡೆಸಲು ಒಕ್ಕೂರಲ ನಿರ್ಧಾರ ಕೈಗೊಳ್ಳಲಾಯಿತು.

ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ಮಾತನಾಡಿ ‘ಮಿ ಮರಾಠಾ’ ಎಂದು ಮರಾಠಿಗರು ಎದೆ ತಟ್ಟಿ ಹೇಳುತ್ತಾರೆ, ಅಂಥ ಅಭಿಮಾನ ನಮ್ಮಲ್ಲಿ ಯಾರಿಗಿದೆ ತೋರಿಸಿ ಎಂದು ಸಭೆಯಲ್ಲಿ ಅಸಮಧಾನದ ಸವಾಲೆಸೆದರು.
ಸಿದ್ದನಗೌಡ ಪಾಟೀಲ, ಅಶೋಕ ಚಂದರಗಿ, ರಾಘವೇಂದ್ರ ಜೋಶಿ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷ ದೀಪಿಕಾ ಚಾಟೆ, ಬಸವರಾಜ ಸಸಾಲಟ್ಟಿ ಇತರರು ಉಪಸ್ಥಿತರಿದ್ದರು.