SHARE

ಬೆಳಗಾವಿ: 1984 ನೇ ಬ್ಯಾಚ್ ನ ಹಿರಿಯ ಐಎಎಸ್ ಅಧಿಕಾರಿ ಕನ್ನಡಿಗ ಡಾ. ಅಶೋಕ ಮಹಾದೇವರಾವ್ ದಳವಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯದರ್ಶಿ(secretary) ಹುದ್ದೆಗೆ  ಗುರುವಾರ ಸಂಜೆ ಮುಂಬಡ್ತಿ ನೀಡಿದ್ದಾರೆ.ಬೆಳಗಾವಿ ಜಿಲ್ಲೆಯ ಕನ್ನಡಿಗರೊಬ್ಬರು ಕೇಂದ್ರದ ಕಾರ್ಯದರ್ಶಿ ಹುದ್ದೆ ಪಡೆಯುತ್ತಿರುವುದು ಸಂತಸ ಮೂಡಿಸಿದೆ.

ಜಿಲ್ಲೆಯ ಕೌಜಲಗಿಯಲ್ಲಿ ಪ್ರಾಥಮಿಕ ಶಿಕ್ಷಣ, ವಿಜಯಪುರ ಸೈನಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಹಾಗೂ ಧಾರವಾಡ ಕೃಷಿ ವಿವಿಯಲ್ಲಿ ಎಂಎಸ್ ಸಿ(final) ಓದುತ್ತಿದ್ದಾಗ 1981 ರಲ್ಲಿ IPS ಪರೀಕ್ಷೆ ಪಾಸು ಮಾಡಿದ ಅವರು ಹೈದರಾಬಾದ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಆಂದ್ರಪ್ರದೇಶದ ನಲ್ಲೂರು ಜಿಲ್ಲೆಯ ಗುಡೂರು ASP ಯಾಗಿ ಸೇವೆ ಆರಂಭಿಸಿದರು.

ಐಪಿಎಸ್ ಸೇವೆಯಲ್ಲಿದ್ದಾಗ ಮತ್ತೆ ಛಲ ಬಿಡದೇ ಪರೀಕ್ಷೆ ಎದುರಿಸಿ 1984 ರಲ್ಲಿ IAS ಪರೀಕ್ಷೆ ಪಾಸು ಮಾಡಿ ಮಸ್ಸೂರಿಯಲ್ಲಿ ತರಬೇತಿ ನಂತರ ಓರಿಸ್ಸಾ ಕೇಡರ್ ಪಡೆದು ರಾಯಗಢ ಜಿಲ್ಲೆಯ ಗುಣಾಪುರ ಹೆಚ್ಚುವರಿ ಜಿಲ್ಲಾಧಿಕಾರಿ(ADC)ಯಾಗಿ ಸೇವೆ ಪ್ರಾರಂಭಿಸಿದರು.

ಕಾಳಹಂಡಿ ಮನೆಮಗ:

ಓರಿಸ್ಸಾದ ಪೂರ್ಣ ಕಗ್ಗಾಡಿನಿಂದಾವೃತ ಗಿರಿಜನರು ವಾಸಿಸುವ ಕಾಳಹಂಡಿ ಜಿಲ್ಲೆಯಲ್ಲಿ ಅನಕ್ಷರತೆ, ಬಡತನ, ಅಪೌಷ್ಠಿಕತೆ, ಸಾಮಾಜಿಕ ಪಿಡುಗುಗಳು, ಮುಖ್ಯವಾಗಿ ಹಸಿವು ಮತ್ತು ರೋಗರುಜಿನಗಳಿಂದ ಸಾಯುತ್ತಿದ್ದ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಚಿಂತಿತರಾಗಿದ್ದ ಅಲ್ಲಿನ ಮುಖ್ಯಮಂತ್ರಿ ಬಿಜು ಪಟ್ನಾಯಕ ಸರಕಾರ ಸಾಮಾಜಿಕ ಕಳಕಳಿಯ ದಕ್ಷ ಐಎಎಸ್ ಅಧಿಕಾರಿಗಳ ಹುಡುಕಾಟ(chosen) ನಡೆಸಿ ಅಶೋಕ ದಳವಾಯಿ ಅವರನ್ನು ಜಿಲ್ಲಾಧಿಕಾರಿಯಾಗಿ ಕಳಿಸಿತು.

ಸುಮಾರು 4 ವರ್ಷ ಕಾಳಹಂಡಿ ಜಿಲ್ಲಾಧಿಕಾರಿಯಾಗಿ ಮಾಡಿದ ನಿರೀಕ್ಷೆ ಮೀರಿದ ಸೇವೆ ಸಾಧನೆಗೆ ಮತ್ತು ಅಭಿವೃದ್ಧಿಗೆ ರಾಜ್ಯ ಕೇಂದ್ರ ಸರಕಾರಗಳು ಸಂತುಷ್ಟಗೊಂಡಿದ್ದವು.  ಒಮ್ಮೆಲೆ ಓರಿಸ್ಸಾ ಕೃಷಿ ಸಚಿವಾಲಯದ ಕಾರ್ಯದರ್ಶಿಯಾಗಿ, ಸ್ಟೀಲ್ ಮತ್ತು ಮೈನ್ಸ್ ಸಚಿವಾಲಯದ ಕಾರ್ಯದರ್ಶಿ, ಚಿಯಂಜೋರ್ ಪ್ರಾದೇಶಿಕ ಆಯುಕ್ತ(Regional commissioner) ಆಗಿ ಕಾರ್ಯನಿರ್ವಹಿಸಿದ್ದ ಅವರನ್ನು ಎಸ್. ಎಂ. ಕೃಷ್ಣ ನೇತ್ರತ್ವದ ಕರ್ನಾಟಕ ಸರಕಾರ ರಾಯಚೂರು ಜಿಲ್ಲಾಧಿಕಾರಿ ಯಾಗಿ deputation ಮೇಲೆ 7 ವರ್ಷ ಅವಧಿಗೆ ಕರ್ನಾಟಕಕ್ಕೆ ಕರೆಸಿಕೊಂಡಿತ್ತು. ರಾಜ್ಯದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಯಾಗಿ, ಆಧಾರ ಕಾರ್ಡ್(UIAI) ದಕ್ಷಿಣ ಭಾರತದ ಮಹಾಕಾರ್ಯದರ್ಶಿಯಾಗಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕೇಂದ್ರ ಕೃಷಿ, ಸಹಕಾರ ಹಾಗೂ ರೈತ ಕಲ್ಯಾಣ ಹೆಚ್ಚುವರಿ ಕಾರ್ಯದರ್ಶಿ(Addl. Secretary) ಯಾಗಿ ಸದ್ಯ ಸೇವೆ ಸಲ್ಲಿಸುತ್ತಿದ್ದರು.

ಪ್ರತಿ ಹುದ್ದೆಯಲ್ಲೂ ತೋರಿದ ದಕ್ಷತೆಗೆ ಸರಕಾರಗಳಿಂದ ಮನ್ನಣೆ ಪಡೆದಿದ್ದ ಅಶೋಕ ದಳವಾಯಿ ಅವರಿಗೆ ಕೇಂದ್ರ ಸರಕಾರ ಕಾರ್ಯದರ್ಶಿ ರ್ಯಾಂಕಿಗೆ  ಮುಂಬಡ್ತಿ ನೀಡಿದ್ದು, ಕೃಷಿ ಕಾರ್ಯದರ್ಶಿಯಾಗಿ ಹುದ್ದೆ ನೀಡುವ ನಿರೀಕ್ಷೆ ಇದೆ. ದೇಶದ ಅತ್ಯುನ್ನತ ಕ್ಯಾಬಿನೆಟ್ ಕಾರ್ಯದರ್ಶಿ(cabinet secretary) ಹುದ್ದೆ ಅಲಂಕರಿಸುವಲ್ಲಿ ಕನ್ನಡಿಗ ಅಶೋಕ ದಳವಾಯಿ ಸಮೀಪಗತರಾಗಿದ್ದು, ಕರ್ನಾಟಕದವರೊಬ್ಬರಿಗೆ ಆ ಪದವಿ ಸಿಗಲಿ ಎಂದು ತವರು ಜಿಲ್ಲೆಯಿಂದ ಆಶಯ ವ್ಯಕ್ತವಾಗಿದೆ.