SHARE

ಬೆಳಗಾವಿ: ಬಡವರ ಆಶಾ ಕಿರಣ ಬಿಪಿಎಲ್ ಕಾರ್ಡನಿಂದ ಬಡವರಿಗೆ ಒಂದು ಎಕರೆ ಹೊಲ ಇದ್ದಷ್ಟು ಬಲ ಬಂದಿದೆ ಎಂದು ಅನ್ನಭಾಗ್ಯ ಫಲಾನುಭವಿಗಳ ಪ್ರತಿನಿಧಿ ಸುವರ್ಣ ಬಡಿಗೇರ *ಜನಮನ* ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.ಬಡವರಿಗೆ ಬಹಳ ಅನುಕೂಲವಾದ ಅನ್ನಭಾಗ್ಯದಿಂದ ಚಿಂತೆಯಿಲ್ಲದೆ ಹೊಟ್ಟೆತುಂಬ ಉಣ್ಣಲು ಸಾಧ್ಯವಾಗಿದೆ. ಸರಕಾರ ಕನಿಷ್ಠ 2 ಕೆಜಿ ಗೋಧಿ, ಹೆಸರುಕಾಳು ಮತ್ತು ಒಂದು ಲೀಟರ್ ಸೀಮೆಎಣ್ಣೆ  ಕೊಡುವುದನ್ನು ಪ್ರಾರಂಭಿಸಬೇಕೆಂದು ಸರಕಾರಕ್ಕೆ ಸುವರ್ಣ ಸಲಹೆ ನೀಡಿದರು. ಬಿಪಿಎಲ್ ಕಾರ್ಡ್ ನಿಂದ ಆರೋಗ್ಯ ಭಾಗ್ಯ, ವಿವಿಧ ಉಚಿತ ಯೋಜನೆಗಳಿಗೆ ರಹದಾರಿ ಬಿಪಿಎಲ್ ಕಾರ್ಡ್ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸತತವಾಗಿ ಕರೆಂಟ್ ಕೊಡುವುದರಿಂದ ರಾತ್ರಿ ದುಶ್ಚಟಗಳಿಗೆ ಬಲಿಯಾಗಿ ನಿದ್ದೆಗೆಟ್ಡು ಹೊಲಗಳಿಗೆ ನೀರು ಹಾಯಿಸುವ ರೈತರ ತೊಂದರೆ ನೀಗಿಸಿದಂತಾಗುತ್ತದೆ ಎಂದು ಮತ್ತೊಬ್ಬ ಫಲಾನುಭವಿ ಸಲಹೆ ನೀಡಿದರು.