SHARE

ಬೆಳಗಾವಿ : ಕಾಕತಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದಗೌಡ ಸುಣಗಾರ ಸೇರಿದಂತೆ ಹಲವಾರು ಜನ ಶೀಘ್ರವೇ ಜೆಡಿಎಸ್ ಸೇರಲಿದ್ದಾರೆ.ಕಾಕತಿ ಗ್ರಾಮ ಯಮಕನಮರಡಿ ಮೀಸಲು ಕ್ಷೇತ್ರವಾದ್ದರಿಂದ ಪಕ್ಕದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸಿದಗೌಡ ಸುಣಗಾರ,ಈಗಾಗಲೇ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಜಿಪಂ. ಸದಸ್ಯರಾಗಿರುವ ಸಿದಗೌಡ ಸುಣಗಾರ ಅವರಿಗೆ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ಆನಂದಸ್ವಾಮಿ ಗಡ್ಡದೇವರಮಠ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಆಶೀರ್ವಾದ ಇರುವುದು ಸ್ಪಷ್ಟ.ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಮುಖಂಡ ಶ್ರೀಶೈಲ ಫಡಗಲ್, ಸಿದಗೌಡ ಸುಣಗಾರ ಸೇರಿದಂತೆ ಇಬ್ಬರು ಜಿಪಂ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡ ಬಸವರಾಜ ಮೇಳೆದ,ತಾಪಂ. ಸದಸ್ಯರು ಹಲಕೆಲವು ಬಿಜೆಪಿ,ಕಾಂಗ್ರೆಸ್ ಸದಸ್ಯರು ಸೇರಿ ಹಲಕೆಲವರು ಶೀಘ್ರದಲ್ಲಿಯೇ ಜೆಡಿಎಸ್ ಸೇರಲಿದ್ದಾರೆ ಎಂದು ತಿಳಿಸಿದರು.