SHARE

ಬೆಳಗಾವಿ: ರೈಲ್ವೇ ಅಡಿ ಮಲಗಿ ನಗರದ ಗೋಗಟೆ ಮಹಾವಿಧ್ಯಾಲಯದ ಬಿಕಾಂ ಎರಡನೇ ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಎರಡು ಹಾಗೂ ಮೂರನೇ ರೈಲ್ವೇ ಗೇಟ್ ಮಧ್ಯದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದವಳನ್ನು ಮಚ್ಛೆ ಗ್ರಾಮದ ನಿಶಾ ಎಸ್. ಪಾಟೀಲ(20) ಎಂದು ಕಾಲೇಜು ಬ್ಯಾಗನಲ್ಲಿ ಸಿಕ್ಕ ಗುರುತಿನ ಪತ್ರದಿಂದ ಗುರುತಿಸಲಾಗಿದೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ.ಪತ್ರವೂ ಪೊಲೀಸರಿಗೆ ಸಿಕ್ಕಿಲ್ಲ. ಘಟನೆಯಿಂದ ಕೆಲಕಾಲ ದುಖಃದ ವಾತಾವರಣ ಉಂಟಾಗಿತ್ತು. ಪೊಲೀಸರು ಪರಿಶೀಲನೆ ನಡೆಸಿದರು.