SHARE

ಬೆಳಗಾವಿ: ಬಿಜೆಪಿಯೆಡೆಗೆ ಎಸ್ ಸಿ/ ಎಸ್ ಟಿ ಹಾಗೂ ಓಬಿಸಿ ವರ್ಗಗಳ ಜನತೆ ಆಕರ್ಷಿತರಾಗುವುದನ್ನು ಸಹಿಸದ ಕೆಲವರು ಕೊಲೆ ಮಾಡಿಸುವ ಕೀಳುತನಕ್ಕೆ ಇಳಿಯುತ್ತಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಮುಖಂಡರ ಮೇಲಿನ ಹತ್ಯೆ ಖಂಡಿಸಿ ಶುಕ್ರವಾರ ಬಿಜೆಪಿ ಕಾಯ೯ಕತ೯ರ ಚನ್ನಮ್ಮ ವೃತ್ತದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸುಮಾರು ದಿನಗಳಿಂದ ರಾಜ್ಯದಲ್ಲಿ ರಾಜಕೀಯ ಪ್ರೇರೆಪಿತವಾಗಿ ಆರ್ ಎಸ್ ಎಸ್ ಹಾಗೂ‌ ಬಿಜೆಪಿ‌ ಮುಖಂಡರ ಹತ್ಯೆ ನಡೆಯುತ್ತಿದೆ. ಆಣೆಕಲ್ಲ ವಿಧಾನ ಸಭಾ ಕ್ಷೇತ್ರದ ಬಿಜೆಪಿಯ ಎಸ್ಸಿ ಎಸ್ಟಿ ಘಟಕದ ಮುಖಂಡರಾದ ಹರಿಷ ಅವರನ್ನು ಹತ್ಯೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಂಸದ ಸುರೇಶ ಅಂಗಡಿ,ರಾಜೇಂದ್ರ ಹರಕುಣಿ,ರಾಜು ಚಿಕ್ಕನಗೌಡರ,ಲೀನಾ ಟೋಪಣ್ಣನವರ, ಶಿವಾನಂದ ಖಾರಿ,ಆಕಾಶ ಹುಲಿ,ಸದಾನಂದ ಗುಂಟೆಪ್ಪನವರ ಸೇರಿದಂತೆ ಮೊದಲಾದವರು ಹಾಜರಿದ್ದರು.