SHARE

ಬೆಳಗಾವಿ:ಶುಕ್ರವಾರ ತಡರಾತ್ರಿ ಪ್ರಚೋದಿತ ‘ಜೈ’… ಬರಹ ಹೊತ್ತು ಬಂದಿದ್ದ ಮಹಾರಾಷ್ಟ್ರದ ಬಸ್ ಸ್ವಾಗತಿಸಿ ಕರ್ನಾಟಕದ ವಿರುದ್ಧ ಘೋಷಣೆಗಳನ್ನು ಕೂಗಿದ್ದ ಎಂಇಎಸ್ ಬೆಂಬಲಿತ ಏಳು ಜನ ಸಹಿತ 15 ಜನರ ಮೇಲೆ ಜಿಲ್ಲಾಡಳಿತ ಇಂದು ಗದಾ ಪ್ರಹಾರ ನಡೆಸಿ ಆಘಾತ ನೀಡಿದೆ.

ತಡರಾತ್ರಿ ರಂಪಾಟ ನಡೆಸಿದ್ದ ಝಾಪಾಗಳ ಬಗ್ಗೆ ಸುಮ್ಮನಿದ್ದ ಜಿಲ್ಲಾಡಳಿತ ಇಂದು ಬೆಳಿಗ್ಗೆ ಕಾರ್ಯಾಚರಣೆಗೆ ಇಳಿಯಿತು. ಮಾರ್ಕೆಟ್ ಪೊಲೀಸರು ತಡರಾತ್ರಿ ಸೆರೆ ಹಿಡಿದಿದ್ದ ಫೋಟೊ ಮತ್ತು ವಿಡಿಯೋಗಳ ಆಧಾರದ ಮೇಲೆ ಇಂದು ಕಾರ್ಯಾಚರಣೆಗಿಳಿಯುತ್ತಿದ್ದಂತೆ ರಾತ್ರಿ ಪೌರುಷ ಮೆರೆದಿದ್ದವರು ಪತ್ತೆಯಿಲ್ಲದೇ ಪರಾರಿಯಾಗಿದ್ದಾರೆ.

ಸೂರಜ ಕಣಬರಕರ, ಮದನ ಭಾಮನೆ,ಅಮರ ಯಳ್ಳೂರಕರ,ಗಣೇಶ ದಡ್ಡಿಕರ,ಮೇಘನ ಲಂಗರಖಾಂಡೆ, ಪ್ರಮೋದ ಗಾಯಕವಾಡ ಇವರು ಸೇರಿದಂತೆ ಇತರ 15 ಜನರ ಮೇಲೆ ಮಾರ್ಕೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸೆಕ್ಷೆನ್ಸ್ 143, 147, 153(A) ಅಡಿ ಪ್ರಕರಣ ದಾಖಲಾಗಿದೆ.ಇವರ ಪೈಕಿ ನ್ಯಾಯವಾದಿ ಅಮರ ಯಳ್ಳೂರಕರ ಅವರನ್ನು ಪೊಲೀಸರು ಸಂಜೆ ವಶಕ್ಜೆ ಪಡೆದರು.