SHARE

ಬೆಳಗಾವಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಕಳೆದ ನಾಲ್ಕು ವರ್ಷದ ದುರಾಡಳಿತದಿಂದ ರಾಜ್ಯದ ಜನತೆ ಸಂಕಷ್ಟಕ್ಜೀಡಾಗಿದ್ದು ನೆಲ, ಜಲಕ್ಕೆ ಗಂಡಾಂತರ ಎದುರಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಅಸಮಧಾನ ವ್ಯಕ್ತ ಪಡಿಸಿದರು. ಅವರು ಭಾನುವಾರ ನಗರದ ಅಟಲ್ ಬಿಹಾರಿ ವಾಜಪೇಯಿ ರಸ್ತೆಯಲ್ಲಿ ಸಸಿಗಳಿಗೆ ನೀರು ಹಾಕಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ಕರ್ನಾಟಕದ ನೆಲ ಜಲಕ್ಕೆ ಸಂಕಷ್ಟು ಎದುರಾಗಿದೆ. ರಾಜ್ಯದಲ್ಲಿ ಕಾಡುಗಳ್ಳತನ ಮಿತಿಮೀರಿದೆ,ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದೆ. ಮರಳುಗಾರಿಕೆಯಲ್ಲಿ ರಾಜ್ಯದ ಆಡಳಿತ ಪಕ್ಷದವರು ಸಂಪೂರ್ಣ ಶಾಮಿಲಾಗಿದ್ದಾರೆ ಅದರ ಬಗ್ಗೆ ಸಿದ್ದರಾಮಯ್ಯನವರು ಒಂದೇ ಒಂದು ಮಾತು ಆಡುತ್ತಿಲ್ಲ ಎಂಬ ಭಾವನೆ ರಾಜ್ಯದ ಜನರಲ್ಲಿದ ಕಾಡುತ್ತಿದೆ ಎಂದು ಚುಚ್ಚಿದರು.

ಇಂಥ ಸಂದರ್ಭದಲ್ಲಿ ಕಾಡುಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಇಡೀ ರಾಜ್ಯಾಧ್ಯಂತ ಪ್ರತಿಯೊಬ್ಬರು ಒಂದು ಸಸಿಗಳನ್ನು ನೆಡುವ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ. ಹಸಿರು ಕರ್ನಾಟಕ, ಹಸಿರು ಭಾರತ ಹಿಂದೆ ಮಹಾತ್ಮಾ ಗಾಂಧಿಜೀ ಅವರು ಸತ್ಯಾಗ್ರಹ ಪ್ರಾರಂಭಿಸಿದರೋ ಹಾಗೇ ಪ್ರಧಾನಿ ನರೇಂದ್ರ ಮೋದಿ ಅವರು ಸತ್ಯಾಗ್ರಹ ಇಂದು ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿ ಕಾಡು, ಗಿಡಗಳ್ಳರು ಸೇರಿದಂತೆ ಇತ್ಯಾದಿ ಪೀಡಗುಗಳನ್ನು ನಿವಾರಿಸಿ ಇನ್ನೊಮ್ಮೆ ಭಾರತ ದೇಶವನ್ನು ಸುಜಲಾಂ, ಸುಪಲಾಂ ಮಾಡುವುದರ ಮೂಲಕ ಸಸ್ಯ ಶಾಮಲೆಯನ್ನಾಗಿ ಮಾಡುವ ದೃಷ್ಠಿಯಿಂದ ಕರ್ನಾಟಕ, ಬೆಳಗಾವಿಯನ್ನು ಸಸ್ಯ ಶಾಮಲೆಯನ್ನಾಗಿ ಮಾಡಲು ಸಂಕಲ್ಪ ಹೊತ್ತು ರಾಜ್ಯಾಧ್ಯಂತ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.

ಲೋಕ ಸಭೆ ಹಾಗೂ ರಾಜ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ಕಲ್ಯಾಣಕ್ಕಾಗಿ ಸಂವಿಧಾನದ 124 ಕಾಯ್ದೆಯನ್ನು ತಿದ್ದುಪಡೆ ಮಾಡಿ ಇಡೀ ಭಾರತ ದೇಶದ ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಆಯೋಗ ರಚನೆ ಮಾಡಿದರು. ಈ ಆಯೋಗಕ್ಕೆ ಕಾಂಗ್ರೆಸ್ ನವರು ಸಂವಿಧಾನಾತ್ಮಕವಾಗಿ ಸ್ಥಾನಮಾನ ನೀಡಬೇಕಿತ್ತು. ಆದರೆ ಲೋಕ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡರೂ ರಾಜ್ಯ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ ಗಾಂಧಿ ಹಾಗೂ ಕಾಂಗ್ರೆಸ್ ಸಂಸದರು ಇದನ್ನು ತಡೆಹಿಡಿದು ಹೋರಾಟ ನಡೆಸಿದರು ಎಂದರು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ಹಿಂದುಳಿದ ನಾಯಕರು ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ ಕಾಕಾ ಕಾರ್ಲೇಕರ ಸಮಿತಿ 1957ರಲ್ಲಿ ಕೊಟ್ಟ ಶಿಫಾರಸ್ಸನ್ನು ಹಿಂದುಳಿದ ವರ್ಗಗಳಿಗೆ ಸಂವಿಧಾನಾತ್ಮಕವಾಗಿ ಸ್ಥಾನಮಾನ ನೀಡಬೇಕೆಂದು ಈ ಹಿಂದಿನ ಯಾವುದೇ ಸರಕಾರಗಳು ಜಾರಿಗೆ ತರದಿದ್ದನ್ನು ಪ್ರಧಾನಿ ಮೋದಿ ಅವರು ಜಾರಿಗೆ ತಂದರು. ಪ್ರಧಾನಿಗಳು ಹಿಂದುಳಿದವರ ಕಲ್ಯಾಣಕ್ಕಾಗಿ ತಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋನಿಯಾ, ರಾಹುಲ ಗಾಂಧಿ ಅವರಿಗೆ ಪ್ರತಿಭಟನೆಯ ಪತ್ರ ಬರೆಯಬೇಕಿತ್ತು. ಅಥವಾ ಮೊದಲೇ ಮಧ್ಯ ಪ್ರವೇಶಿಸಿ ಅವರ ಮನವೊಲಿಸಬೇಕಿತ್ತು. ಈ ರೀತಿ ಮಾಡದೆ ಹಿಂದುಳಿದವರ ಪರ ಮೋಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಬರಗಾಲಕ್ಕೆ ಒಳಗಾದ ಕರ್ನಾಟಕಕ್ಕೆ ಮೂರು ವರ್ಷದಲ್ಲಿ ನಾಲ್ಕವರೇ ಸಾವಿರ ಕೋಟಿ ರೂ.ಗಳ ಅನುದಾನವನ್ನು ನೀಡಿದರು. ಅದರಲ್ಲಿ ಐದನೂರು ಕೋಟಿಗೂ ಹೆಚ್ಚು ಬೆಳೆ ಪರಿಹಾರದ ಹಣವನ್ನು ಕರ್ನಾಟಕ ಸರಕಾರ ಬಿಡುಗಡೆ ಮಾಡಿಲ್ಲ. ಈ ಕುರಿತು ಕೇಳಿದರೆ ಕುಂಟು ನೇಪ ಹೇಳುತ್ತಿದೆ ರಾಜ್ಯ ಸರಕಾರ ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನರ ನೇತೃತ್ವದಲ್ಲಿ ರಾಜ್ಯಾಧ್ಯಂತ ಹೋರಾಟ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಮಾಜಿ ಶಾಸಕ ಅಭಯ ಪಾಟೀಲ, ಈರಣ್ಣ ಕಡಾಡಿ ಸೇರಿದಂತೆ ಮೊದಲಾದವರು ಹಾಜರಿದ್ದರು.