SHARE

ಬೆಳಗಾವಿ: ನಗರದ ಉದ್ಯಮಿ ವ್ಯಾಪಾರಿಗಳ ಚಲನವಲನಗಳನ್ನು ಗುರುತಿಸಿ ಕಣ್ಣಿಗೆ ಕಾರಪುಡಿ ಎರಚಿ ಹಣ ದೊಚುತ್ತಿದ್ದ ಆರೋಪಿಗಳನ್ನು ಬೆಳಗಾವಿ ಸಿಸಿಬಿ ಪೊಲೀಸರು ಕಾಯಾ೯ಚರಣೆ ನಡೆಸಿ‌ ಬಂಧಿಸಿದ್ದಾರೆ.

ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಪಿ ಅಮರನಾಥರೆಡ್ಡಿ ಜೂನ 1 ರಂದು ಅನೀಲ್ ಪೋರವಾಲ್ ಎಂಬ ಉದ್ಯಮಿಗೆ ಕಾರದಪುಡಿ ಎರಚಿ ಹಣ ಕಳ್ಳತನ ಮಾಡಿದ್ದ ಆರೋಪಿಗಳಿಂದ 9.88 ಲಕ್ಷ ರೂಪಾಯಿ ಕಳ್ಳತನದ ಹಣ ವಶ,5 ಜನ ಆರೋಪಿಗಳ ಬಂಧಿಸಲಾಗಿದೆ.

ಕಿರಣ ಮದನ್ನವರ(27), ರವಿ ತಳವಾರ(28), ಜೋತಿಬಾ ಹಂಚಿನಮನಿ(22), ಅನೀಲ್ ಪಡೆಣ್ಣವರ(19), ರಾಜೇಶ್ ವರೂರ(19) ಬಂಧಿತ ಆರೋಪಿಗಳು ಇವರು ಬೆಳಗಾವಿ ಮೂಲದವರು. ಪರಾರಿಯಾದ ಒಬ್ಬ ಆರೋಪಿ ಮಲ್ಲೇಶ ಬುಡ್ರಿ ಬಂಧನಕ್ಕೆ ಜಾಲಬೀಸಲಾಗಿದೆ ಈ ಕುರಿತು ಖಡೇಬಜಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಿಸಿಬಿ ಇನ್ಸಪೆಕ್ಟರ್ ಬಿ. ಆರ್. ಗಡ್ಡೇಕರ್ ಹಾಗೂ ಮಾಳಮಾರುತಿ ಠಾಣೆ ಇನ್ಸಪೆಕ್ಟರ್ ಕೇಶವ ಟಿಂಗಿಕಾರ ಸಹಿತ ಪೊಲೀಸ್ ತಂಡ ಹಾಜರಿದ್ದರು.