SHARE

ಬೆಳಗಾವಿ: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ (ST)ಗೆ ಸೇರಿಸಿಬೇಕು ಎಂಬ ಮುಖ್ಯ ಬೇಡಿಕೆಯಿಟ್ಟು ಜೂ.14 ರಂದು ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ರಾಜ್ಯ ಕಾರ್ಯದರ್ಶಿ ವಿರಣ್ಣ ಹಳೇಗೌಡರ ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಕುರುಬರನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ಶಿಫಾರಸ್ಸು ಮಾಡಬೇಕು. ಇಲ್ಲದಿದ್ದರೆ ಸಿಎಂ ವಿರುದ್ಧ ಪ್ರಚಾರ ಮಾಡಿ ಮುಂದಿನ ವಿಧಾನ ಸಭೆಯ ಚುನಾವಣೆಯಲ್ಲಿ ನಮ್ಮ ಸಮುದಾಯದ ಮುಖಂಡರನ್ನು ರಾಜ್ಯದ ಎಲ್ಲ ಕ್ಷೇತ್ರದಲ್ಲಿ ನಿಲ್ಲಿಸ್‌ಲಾಗುವುದು ಎಂದರು.

ಹಾಗೇಯೆ ನಮ್ಮ ಸಮಾಜವನ್ನು ಯಾರು ಎಸ್ಟಿಗೆ ಸೇರಿಸುತ್ತಾರೆ ಎಂದು ಹೇಳುತ್ತಾರೊ ಅವರಿಗೆ ನಮ್ಮ ಮತಗಳನ್ನು ನೀಡುತ್ತೆವೆ. ಅಲ್ಲದೇ ಜುಲೈ 15 ರಂದು ಬಾಗಲಕೋಟ ಜಿಲ್ಲಾಧಿಕಾರಿ ಕಚೇರಿಗೆ ಸುಮಾರು 2500 ಕುರಿಗಳ ಜತೆಗೆ ಹೋಗಿ ಎಸ್ಟಿ ಸಮುದಾಯಕ್ಕೆ ಸೇರಿಸಲು ಮನವಿಯನ್ನು ನೀಡಲಾಗುತ್ತದೆ ಎಂದರು. ಅ.15 ರ ಒಳಗಾಗಿ ಎಸ್ಟಿ ಸಮುದಾಯಕ್ಕೆ ಸೇರಿಸಲು ಕೇಂದ್ರಕ್ಕೆ ಸಿಫಾರಸ್ಸು ಮಾಡಿಸದಿದ್ದರೆ ರಾಜ್ಯದ್ಯಂತ ಕುರುಬ ಸಮುದಾಯದ ಎಲ್ಲ ಬಾಂಧವರು ಅಮರಣಾಂತ ಉಪವಾಸ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಸಿದ್ದು ತೇಜಿ, ಬೆಳಗಾವಿ ಮಹಿಳಾ ಅಧ್ಯಕ್ಷೆ ಗಂಗವ್ವ ಕುರಬರ, ರಾಜ್ಯ ಮಹಿಳಾ ಸಂಚಾಲಕಿ ಭಾಗ್ಯಶ್ರೀ, ರಾಜಶೇಖರ ದೊಡ್ಡಣ, ವಿಠ್ಠಲ ಸೇರಿದಂತೆ ಇತರರು ಇದ್ದರು.