SHARE

ಬೆಳಗಾವಿ: ಖಾನಾಪುರ ತಾಲೂಕಿನ ನಂದಗಡ ಪೋಲೀಸ್ ಠಾಣೆಯ ಪಿ.ಎಸ್.ಐ ಯು.ಎಸ್.ಆವಟೆ ನಿಂದ ವರದಿಗಾರ ಮೇಲೆ ಮಾರಣಾಂತಿಕ ಹಲ್ಲೆಯ ಘಟನೆ ನಡೆದಿದೆ. ಖಾನಾಪುರ ತಾಲೂಕು ಪ್ರಜಾವಣಿ ಪರ್ತಕರ್ತರಾದ ಪ್ರಸನ್ನ ಕುಲಕರ್ಣಿ ಬೇಕವಾಡ ಗ್ರಾಮದಲ್ಲಿ ಸುದ್ದಿಗೆ ತೆರಳಿದಾಗ ವೈಯಕ್ತಿಕ ‌ದ್ವೇಷ ಇಟ್ಟುಕೊಂಡು ಸಾರ್ವಜನಿಕ ಸಮ್ಮುಖದಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಮೂಲಗಳು ತಿಳಸಿವೆ.

ಪಿಎಸ್ಐ ಆವಟೆಯವರ ಈ ಅಮಾನವೀಯ ಕೃತ್ಯವನ್ನು ಸ್ಥಳೀಯ ವರದಿಗಾರರು ಮತ್ತು ಕನ್ನಡಪರ ಸಂಘಟನೆಯ ಮುಖಂಡರು ಖಂಡಿಸಿದ್ದಾರೆ. ಪದೇ ಪದೇ ಒಂದಿಲ್ಲೊಂದು ನೆಪವೊಡ್ಡಿ ಈ ರೀತಿ ಪತ್ರಕರ್ತರ ಮೇಲೆ ನಿರಂತರ ಹಲ್ಲೆ ನಡೆಯುತ್ತಲ್ಲೇ ಇವೆ ಹಿತಂಹ ಪ್ರಕರಣಗಳು ಮರುಕಳಿಸದಂತೆ ಸರಕಾರ ಸೂಕ್ತ ಕಾನೂನು ಕ್ರಮ ಕೈಗೋಳಬೇಕಾಗಿದೆ.