SHARE

ಬೆಳಗಾವಿ: ಉತ್ತರ ಹಾಗೂ ದಕ್ಷಿಣ ಕ್ಷೇತ್ರ ಸೇರಿ ಇಡೀ ನಗರದ ನಾಲೆ ಆವೃತ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಮಾಜಿ ಮೇಯರ್ ಕಿರಣ ಸಾಯನಾಕ್ ಆಗ್ರಹಿಸಿದ್ದಾರೆ. ಇಂದು ನಡೆದ ಪಾಲಿಕೆ ಸಭೆಯಲ್ಲಿ ಮಾತನಾಡಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲವೇ ಒತ್ತಡಕ್ಕೆ ಮಣಿಯುವ ಪ್ರಶ್ನೆ ಬರುವುದಿಲ್ಲ. ಉತ್ತರ ಹಾಗೂ ದಕ್ಷಿಣ ಎರಡೂ ಕ್ಷೇತ್ರಗಳಲ್ಲಿ ನಾಲೆಯ ಮೇಲೆ ಅಕ್ರಮವಾಗಿ ಕಟ್ಟಿದ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಪಡಿಸಿದರು.

ಉತ್ತರ ಕ್ಷೇತ್ರದಲ್ಲಿ ನಾಲೆಗಳ‌ ಮೇಲೆ ರಾಜಾರೋಷವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಅನಧಿಕೃತವಾಗಿ ಮನೆಗಳನ್ನು ಕಟ್ಟಡ ಕಟ್ಟಿದ್ದಾರೆ. ಪಾಲಿಕೆಯ ಸಿಡಿಪಿ ಪ್ಲ್ಯಾನ್ ನಕ್ಷೆಯಲ್ಲಿ ನಾಲೆಗಳಿರುವೆಡೆಯಲ್ಲಿ ಇಂದು ಮನೆ ನಿರ್ಮಾಣ ಮಾಡಲು ಅನುಮತಿ ಏಕೆ ಕೊಟ್ಟಿರಿ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು. ಟಿ.ವಿ.ಸೆಂಟರ್ ನಲ್ಲಿ ಪ್ರಭಾವಿ ಆಡಳಿತ ಪಕ್ಷದ ಶಾಸಕರೊಬ್ಬರು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಅದರ ಅನುಮತಿ ನೀಡಿದ ಅಧಿಕಾರಿಯನ್ನು ಈ ಕೂಡಲೇ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.

ನಗರ ಸೇವಕ ದೀಪಕ‌ ಜಮಖಂಡಿ ಮಾತನಾಡಿ ಪಾಲಿಕೆಯ ಕೆಲ ಅಧಿಕಾರಿಗಳು ಕೆಲವರೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳೇ ನಗರದ ವ್ಯವಸ್ಥೆ ಕೆಡಲು ಮುಖ್ಯ ಕಾರಣ ಹೊರತು ಮತ್ಯಾರಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಆಯುಕ್ತ ಶಶಿಧರ ಕುರೇರ ಮಾತನಾಡಿ ನಾಲೆಯ ಮೇಲೆ ಕಟ್ಟಡ ಕಟ್ಟಲು ಅನುಮತಿ ನೀಡಲು ಅವಕಾಶವೇ ಇಲ್ಲ. ಯಾರೇ ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರೂ ನಾಲೆ ಮೇಲಿರುವ ಕಟ್ಟಡವನ್ನು ತೆರವುಗೊಳಿಸಲಾಗುವುದು ಎಂದು ಘೋಷಿಸಿದರು. ನಗರ ಸೇವಕಿ ಸರಳಾ ಹೇರೇಕರ ಆರೋಪಿಸಿ ಅಧಿಕಾರಿಗಳು ಪರವಾಣಗಿ ನೀಡಲು ಹಣ ಪಡೆಯುತ್ತಾರೆ ಎಂದು‌ ಮಾಡಿದ ಆರೋಪವನ್ನು ಅಲ್ಲಗಳೆದ ಆಯುಕ್ತ ಶಶಿಧರ ಕುರೇರ ನನ್ನ‌ ಅಧಿನದ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಕಟ್ಟಡದ ಅನುಮತಿಗೆ ಹಣ ಪಡೆದ ಮಾಹಿತಿ ಇಲ್ಲ ಎಂದರು.