SHARE

ಬೆಳಗಾವಿ: ಹುಕ್ಕೇರಿಯ ಹಿರೇಮಠದ ವತಿಯಿಂದ ಸೆ.21ರಿಂದ 30 ರವರೆಗೆ ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಪೀಠಾರೋಹಣ ರಜತ ಮಹೋತ್ಸವ ಸುಮಾರು 10 ದಿನ ನಡೆಯಲಿದೆ. ಧಾರ್ಮಿಕ ಜಗತ್ತಿಗೆ ಸ್ವಾಮೀಜಿ ಅವರು ಸವೆಸಿದ 25 ವರ್ಷಗಳನ್ನು ನೆನೆದು ಈ ವರ್ಷ ಈ ವಿಶೇಷ ಪೀಠಾರೋಹಣ ಮಠದಲ್ಲಿ ನಡೆಯಲಿದೆ.

ದೇಶದಲ್ಲಿ ಯೋಗವನ್ನು ಹೆಚ್ಚು ಮುನ್ನಲೆಗೆ ತಂದ ಹಾಗೂ ಸ್ವದೇಶಿ ಅಭಿಯಾನದ ಮುಖ್ಯ ದಾರಿದೀಪ ಶ್ರೀ ಬಾಬಾ ರಾಮದೇವ ಹುಕ್ಕೇರಿಗೆ ಆಗಮಿಸಲಿದ್ದು, ಅವರನ್ನು ಸೆ.24 ರಂದು ‘ರೇಣುಕಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತುಮಕೂರ ಶಿವಗಂಗಾ ಕ್ಷೇತ್ರದ ಡಾ. ಮಲ್ಲಯ್ಯ ಸ್ವಾಮೀಜಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೇಹಾಭಿಮಾನಕ್ಕಿಂತ ದೇಶಾಭಿಮಾನ ಬಹಳ ದೊಡ್ಡದು. ಅಪರೂಪದ ವ್ಯಕ್ತಿ ಶ್ರೀರಾಮದೇವ ಬಾಬಾ ಅವರಿಗೆ, ಮುಗಳಖೋಡ ಸ್ವಾಮೀಜಿ ಅವರನ್ನೊಳಗೊಂಡು ಸುಮಾರು ೧೦೮ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ರೇಣುಕಶ್ರೀ ಪ್ರಶಸ್ತಿ ನೀಡಲಾಗುವುದು. ಬಾಬಾ ರಾಮದೇವ ಅವರು ಆಗಮಿಸುವಾಗ ಜಿಲ್ಲೆಯ ಸುಮಾರು 250 ಕಡೆಗೆ ಉಚಿತ ಯೋಗ ಕಾರ್ಯಕ್ರಮ ನಡೆಯಲಿವೆ ಎಂದರು. ಜತೆಗೆ ಸೆ. 27 ರಂದು ಸಾಲುಮರದ ತಿಮ್ಮಕ್ಕ ಅವರಿಗೆ ‘ಮಹಾಮಾತಾ’ ಪ್ರಶಸ್ತಿ ನೀಡಲಾಗುವುದು ಪತಂಜಲಿ ಪೀಠದ ರಾಜ್ಯ ಉಸ್ತುವಾರಿ ಬವರಲಾಲ್ ಆರ್ಯ, ಆರತಿ ಕಾನಗೋ ಮಹಿಳಾ ರಾಜ್ಯ ಪ್ರಭಾರಿ, ಕಿರಣ ಮನ್ನೋಳಕರ ರಾಜ್ಯ ಸಮಿತಿ ಸದಸ್ಯ, ಸಂಜಯ ಕುಸ್ತಿಗಾರ ಇತರರು ಉಪಸ್ಥಿತರಿದ್ದರು.