SHARE

ಬೆಳಗಾವಿ/ಹುಕ್ಕೇರಿ: ಯೋಗ ಗುರು ಬಾಬಾ ರಾಮದೇವ ಅವರಿಗೆ ಕರ್ನಾಟಕದ ವಿವಿಧ ಮಠಗಳ ಶ್ರೀಗಳಿಂದ ರವಿವಾರದಂದು ರೇಣುಕಾ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಹುಕ್ಕೇರಿ ಪಟ್ಟಣದಲ್ಲಿ ಇರುವ ಹಿರೇಮಠದಿಂದ ನೀಡುವ ರೇಣುಕ ಶ್ರೀ ಪ್ರಶಸ್ತಿಯನ್ನು ಯೋಗ ಗುರು ಬಾಬಾ ರಾಮದೇವ್‌ ಅವರಿಗೆ ಈ ಬಾರಿ ನೀಡಿ ಗೌರವಿಸಲಾಯಿತು.

ಹುಕ್ಕೇರಿ ಹಿರೇಮಠದ ಪೀಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ದೇಶಾಭಿಮಾನ ಬಿತ್ತುವ ಕಾರ್ಯವನ್ನು ಸ್ವಾಮೀಜಿಗಳು ಮಾಡಬೇಕು. ಬಾಬಾ ರಾಮದೇವ್‌ ಅವರು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಕರ್ನಾಟಕದ ಸ್ವಾಮೀಜಿಗಳು ಅವರೊಂದಿಗಿರುತ್ತೇವೆ ಎಂದರು. 

ಮುಗಳಖೊಡದ ಮುರಘರಾಜೇಂದ್ರ ಶ್ರೀ, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಶ್ರೀ, ಕಟಕೋಳದ ವೀರಭದ್ರ ಶ್ರೀ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಮಗಿಮಠ ಮತ್ತೀತರು ಉಪಸ್ಥಿತರಿದ್ದರು.