SHARE

ಖಾನಾಪುರ: ಮೈಸೂರಿನ ಹುಲಿ ಎಂಬ ಹೆಸರಿನಿಂದ ಬಿರುದಾಂಕಿತನಾದ ಹಜರತ್ ಟಿಪ್ಪು ಸುಲ್ತಾನ ದೇಶಕಂಡ ಅಪ್ರತೀಮ ವೀರ, ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಸ್ವಂತ ಮಕ್ಕಳನ್ನೆ ಒತ್ತೆಇಟ್ಟಂತಹ ಮಹಾನ ನಾಯಕ ಎಂದು ಕೆಪಿಸಿಸಿ ಹಿಂದುಳಿದ ವಿಭಾಗದ ಬೆಳಗಾವಿ ಜಿಲ್ಲಾ ಕಮೀಟಿ ಸದಸ್ಯ ಹಾಗೂ ಕನ್ನಡ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಪಾಂಡುರಂಗ ಮೀಟಗಾರ ಹೇಳಿದರು.

ತಾಲೂಕಿನ ಲಿಂಗನಮಠ ಗ್ರಾಮದ ಉರ್ದು ಶಾಲೆಯಲ್ಲಿ ಶನಿವಾರ ದಿನ ಹಮ್ಮಿಕೊಂಡಂತಹ ಹಜರತ್ ಟಿಪ್ಪು ಸುಲ್ತಾನರ 268ನೇ ಜಯಂತಿ, ಉರ್ದು ಕವಿ ಅಲ್ಲಮಾ(ಮಹಮ್ಮದ) ಇಕಬಾಲರ 140ನೇ ಜಯಂತಿ ಹಾಗೂ ಮೌಲಾನಾ ಅಬ್ದುಲ ಕಲಾಂ ಅಜಾದರ 130ನೇ ಜಯಂತಿಯನ್ನು “ರಾಷ್ಟ್ರೀಯ ಶಿಕ್ಷಣ ದಿವಸ” ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. ಹಜರತ್ ಟಿಪ್ಪು ಸುಲ್ತಾನರು ಭಾರತ ದೇಶದಲ್ಲಿ “ಕ್ಷೀಪಣಿ” ಉಡಾಯಿಸಿದ ಪ್ರಥಮ ನಾಯಕ. ಇವರು ತಮ್ಮ ಆಸ್ಥಾನದಲ್ಲಿ ಹಲವಾರು ಹಿಂದು ಸೈನಿಕರೊಂದಿಗೆ ಬಲಾಡ್ಯ ಸೈನ್ಯವನ್ನು ಹೊಂದಿದ್ದರು. ಜೋತೆಗೆ ಹಲವಾರು ದೇವಾಸ್ಥನಗಳನ್ನು ಕಟ್ಟಿಸಿದ್ದಾರೆಂದು ಹೇಳಿದರು.

ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಸಂಘಟನೆಯ ಯುವ ಘಟಕ ರಾಜ್ಯಾಧ್ಯಕ್ಷ ಕಾಶೀಮ ಹಟ್ಟಿಹೊಳಿ, ಹಜರತ್ ಟಿಪ್ಪು ಸುಲ್ತಾನರ ಬಾಲ್ಯ ಜೀವನ ಹಾಗೂ ಬ್ರಿಟಿಷರ ವಿರುದ್ಧ ಹೋರಾಡಿದ ಯುದ್ಧಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಜೋತೆಗೆ “ಸಾರೆ ಜಹಾ ಸೆ ಅಚ್ಛಾ, ಹಿಂದುಸ್ಥಾನ ಹಮಾರಾ” ಎಂಬ ದೇಶಭಕ್ತಿ ಗೀತೆಯ ಮೂಲಕ ಚಿರಪರಿಚಿತರಾದ ಉರ್ದು ಕವಿ ಅಲ್ಲಮಾ(ಮಹಮ್ಮದ) ಇಕಬಾಲರ ಬಗ್ಗೆ ಕಿರುಪರಿಚಯ ನೀಡುತ್ತಾ, ಸ್ವಾತಂತ್ರ್ಯಾನಂತರ ಭಾರತ ಸರಕಾರದ ಪ್ರಥಮ ಶಿಕ್ಷಣ ಮಂತ್ರಿಯಾದ ಮೌಲಾನಾ ಅಬ್ದುಲ ಕಲಾಂ ಅಜಾದರವರು ಒಬ್ಬ ಒಳ್ಳೆಯ ರಾಜಕಾರಣಿ, ಇವರು ತಮ್ಮ ಹುಟ್ಟಿದ ಹಬ್ಬವನ್ನು “ರಾಷ್ಟ್ರೀಯ ಶಿಕ್ಷಣ ದಿವಸ” ಎಂದು ಆಚರಿಸಿರಿ ಹೇಳಿದ್ದಾರೆಂದರೆ ಇವರಲ್ಲಿರುವ ಶಿಕ್ಷಣ ಪ್ರೀತಿಯನ್ನು ನೋಡಿ ನಾವೆಲ್ಲರೂ ಮೆಚ್ಚುವಂತಹದು ಎಂದು ಹೇಳಿದರು. ಕಾರ್ಯಕ್ರಮದ ಮುಂಚಿತವಾಗಿ ಈ ಮೂರು ಮಹಾನ ವ್ಯಕ್ತಿಗಳ ಹುಟ್ಟುಹಬ್ಬವನ್ನು ಗಣ್ಯರೆಲ್ಲರೂ ಸೇರಿಕೊಂಡು ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಿದರು. ಈ ಸಂಧರ್ಭದಲ್ಲಿ ಶಾಲೆಯ ಮಕ್ಕಳಿಗೆ ನೊಟಬುಕ್ಕಗಳನ್ನು ವಿತರಿಸಿ ಸಿಹಿ ಹಂಚಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉರ್ದು ಶಾಲೆಯ ಎಸ್.ಡಿ.ಎಮ್.ಸಿ ಮತ್ತು ಗ್ರಾಮದ ಹಜರತ್ ಟಿಪ್ಪು ಸುಲ್ತಾನ ಯಂಗ ಕಮೀಟಿ ಅಧ್ಯಕ್ಷ ಟಿಪ್ಪು ತೆರಗಾಂವ ವಹಿಸಿದ್ದರು. ಅತಿಥಿಗಳಾಗಿ ಶಿಕ್ಷಣ ಸಂಯೋಜಕರಾದ ಶಿದ್ದಪ್ಪಾ ಸಾಣಿಕೊಪ್ಪ, ಗ್ರಾಪಂ ಸದಸ್ಯರಾದ ಮುಸ್ತಫಾ ದಾಸ್ತಿಕೊಪ್ಪ, ಮಹಮ್ಮದ ಇಕಬಾಲ ದಾದೂನವರ, ಗ್ರಾಮಸ್ಥರಾದ ಹಸನ ಶೇಖ, ಇಮಾಮಹುಸೇನ ದಲಾಲ, ಅಬ್ದುಲಖಾದರ ಹಂದೂರ, ಸುರೇಶ ಮುಗಳಿಹಾಳ, ಸಿಕಂದರ ತೆರಗಾಂವ, ಗ್ರಾಮದ ಹಜರತ್ ಟಿಪ್ಪು ಸುಲ್ತಾನ ಯಂಗ ಕಮೀಟಿ ಸದಸ್ಯರು, ಉರ್ದು ಮತ್ತು ಕನ್ನಡ ಶಾಲೆಗಳ ಸಿಬ್ಬಂದಿ ವರ್ಗ ಹಾಗೂ ಮುದ್ದು ಮಕ್ಕಳು ಭಾಗವಹಿಸಿದ್ದರು.