SHARE

ಬೆಳಗಾವಿ/ಖಾನಾಪುರ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಡಿ ಗ್ರಾಮವಾದ ಲಿಂಗನಮಠದಲ್ಲಿ ಬಿಜೆಪಿ ಯಿಂದ ಹಮ್ಮಿಕೊಂಡ “ನವ ಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನಾ” ರ್ಯಾಲಿಗೆ ಗ್ರಾಮದಲ್ಲಿ ಗುರುವಾರ ದಿನದಂದು ಸಾಯಂಕಾಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಲಿಂಗನಮಠ ಗ್ರಾಮಕ್ಕೆ ಪ್ರಪ್ರಥಮ ಬಾರಿಗೆ ಬಿ.ಎಸ್.ವೈ ಭೇಟಿ ನೀಡಿರುವುದರಿಂದ ಗ್ರಾಮದ ಮಹಿಳೆಯರಿಂದ ಕುಂಭಮೇಳ ಹಾಗೂ ಯುವಕರಿಂದ ಭವ್ಯವಾದ ಸ್ವಾಗತ ಕೋರಲಾಯಿತು. ಗ್ರಾಮದಲ್ಲಿರುವ ‘ಚನ್ನಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದರು.

ಈ ಸಂಧರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಪ್ರಹ್ಲಾದ ಜೋಶಿ, ತಾಪಂ ಸದಸ್ಯ ಪೂಜಾ ಹರಿಜನ, ತಾಲೂಕಿನ ಬಿಜೆಪಿ ಮುಖಂಡರುಗಳಾದ ವಿಠ್ಠಲ ಹಲಗೇಕರ, ಸುಭಾಶ ಗೋಳಶೆಟ್ಟಿ, ಪ್ರಮೋದ ಕೋಚೆರಿ, ಬಾಬನ್ನಾ ಪಾಟೀಲ, ರಾಜು ರಪಾಟಿ, ಸುಭಾನಿ ನದಾಫ, ಮಾರುತಿ ಹರಿಜನ ಹಲವಾರು ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.