SHARE

ಬೆಳಗಾವಿ: ಬೆಳಗಾವಿಯಲ್ಲಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಉಡುಪಿ ಪೇಜಾವರ ಶ್ರೀಗಳ ವಿರುದ್ದ ಪ್ರತಿಭಟನೆ ನಡೆಯಿತು. ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಪೇಜಾವರ ಶ್ರೀಗಳ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ಸಂವಿಧಾನ ರಚನೆ ವಿಷಯದಲ್ಲಿ ಡಾ. ಅಂಬೇಡ್ಕರ್ ಅವರನ್ನು ಅವಮಾನಿಸುವ ಹೇಳಿಕೆ ಶ್ರಿಗಳು ನೀಡಿದ್ದಾರೆ ಎಂಬುವದನ್ನು ವಿರೋಧಿಸಿ ಪ್ರತಿಭಟನೆ ವ್ಯಕ್ತವಾಯಿತು. ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಮಸಿ ಬಳಿದು, ಪ್ರತಿಕೃತಿ ದಹಿಸಿ ಬೊಬ್ಬೆ ಹಾಕಿದರು. ಸರ್ಕಾರ ಪೇಜಾವರ ಶ್ರೀಗಳನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನ ರಚನಾಕಾರರಲ್ಲಿ ಒಬ್ಬರೆಂದು ಪೇಜಾವರ ಶ್ರೀಗಳು ಉಡುಪಿ ಧರ್ಮಸಭೆಯಲ್ಲಿ ಹೇಳಿದ್ದರು ಎಂಬ ವಿಷಯ ದಲಿತರಲ್ಲಿ ಆಕ್ರೋಶ ಹೆಚ್ಚಿಸಿದ್ದು ಗಮನಕ್ಕೆ ಬಂತು. ಗಜಾನನ ದೇವರಮನಿ, ಕಲ್ಲಪ್ಪ ರಾಮಚನ್ನವರ, ರವಿ ಬಸ್ತವಾಡಕರ, ರಮೇಶ ಕೋಲಕಾರ, ಮೋಹನ ಕಾಂಬಳೆ, ಸಂತೋಷ ತಳವಾರಕರ, ಸಂತೋಷ ಕಾಂಬಳೆ, ಶಂಕರ ಕಾಂಬಳೆ, ಶೇಖರ ಐನವತರ, ಶಂಕರ ಚೌಗುಲೆ, ಸದಾನಂದ ಕೋಲಕಾರ, ಸಚಿನ್ ರಾವಗೋಳ ಇತರರು ಉಪಸ್ಥಿತರಿದ್ದರು.