SHARE

ಬೆಳಗಾವಿ: ಮುಂದಿನ ಎರಡು ಚುನಾವಣೆಗಳ ನಂತರ ನಾನು ‘ಸಿಎಂ ಅಭ್ಯರ್ಥಿ’ ಎಂದು ಮಾಜಿ ಸಚಿವ, AICC ಕಾರ್ಯದರ್ಶಿ ಸತೀಶ ಜಾರಕಿಹೊಳಿ ಆಶಯ ವ್ಯಕ್ತಪಡಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ವಿಷಯ ಹಂಚಿಕೊಂಡ ಅವರು ನಾನು ಯಾವುದೇ ಕಾರಣಕ್ಕೂ ಪ್ರಾದೇಶಿಕ ಪಕ್ಷ ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ. ಈ ವಿಚಾರವಾಗಿ ತಾನು ಯಾರೊಂದಿಗೂ ಮಾತುಕತೆ ನಡೆಸಿಲ್ಲ ಎಂದು ಕಾಂಗ್ರೆಸ್ ತೊರೆಯುವುದನ್ನು ಸತೀಶ ನಯವಾಗಿ ನಿರಾಕರಿಸಿ ಮುಂಚಿತವಾಗಿ ರಾಜಕೀಯ ನಡೆ ಪ್ರದರ್ಶಿಸದ ಧೋರಣೆ ತಳೆದಿದ್ದಾರೆ.

ಮುಂದಿನ ಎರಡು ಚುನಾವಣೆಯ ನಂತರ ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ. ಆಗ ಸಿಎಂ ಆಗಲು ಪ್ರಯತ್ನಿಸುತ್ತೇನೆ ಎಂದು ಮುಂದೊಂದು ದಿನ ರಾಜ್ಯಾಡಳಿತದ ಚುಕ್ಕಾಣಿ ಹಿಡಿಯುವ ಆಸೆ ವ್ಯಕ್ತಪಡಿಸಿದರು. ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಆದರೆ ಜಿಲ್ಲೆಯಲ್ಲಿ ನನ್ನ ಬೆಂಬಲಿಗರಿಗೆ ಟಿಕೇಟ್ ತಪ್ಪಿಸುವ ಕೆಲಸ ನಡೆದಿದೆ. ನನ್ನ ಬೆಂಬಲಿಗರು ಸಮರ್ಥರಿದ್ದರೆ ಟಿಕೆಟ್ ನೀಡಲಿ. ಬೆಳಗಾವಿ ಕಾಂಗ್ರೆಸ್ ನಲ್ಲಿ ಮಾತ್ರ ಸಾಕಷ್ಟು ಅಸಮಾಧಾನವಿದೆ. ಅದನ್ನು ಸರಿಪಡಿಸುವುದಾಗಿ ಪಕ್ಷದ ವರಿಷ್ಠ ಮುಖಂಡರು ಹೇಳಿದ್ದಾರೆ. ಅದು ಕೂಡಲೇ ಆಗಬೇಕು ಎಂದು ಮುತ್ಸದ್ಧಿ ಸತೀಶ ತಿಳಿಸಿದ್ದಾರೆ.