SHARE

ಬೆಳಗಾವಿ: ಮಹಾನಗರ ಪಾಲಿಕೆ ಹೆಸ್ಕಾಂ ಹಣ ಕಟ್ಟಿ ರಸ್ತೆ ಅಗೆಯುವ ಮತ್ತಿತರ ಕೆಲಸಗಳನ್ನು ಮಾಡಬೇಕು ಎಂದು ಮಾಜಿ ಮಹಾಪೌರ ಕಿರಣ ಸಾಯನಾಯಕ ಆಗ್ರಹಿಸಿದರು. ಮಹಾನಗರ ಪಾಲಿಕೆ ಮಾಡಿರುವ ರಸ್ತೆಗಳನ್ನು ಈಗ ಹೆಸ್ಕಾಂ ಕೆಲಸಕ್ಕೆ ಅಗೆಯಲಾಗುತ್ತಿದೆ. ಇದರಿಂದ ರಸ್ತೆಗಳು ಹಾಳಾಗುತ್ತಿವೆ. ಅದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.

ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಹೆಸ್ಕಾಂ ನಡುವಿನ ಒಪ್ಪಂದದಂತೆ ಇಲ್ಲಿಯೂ MoU ಆಗಬೇಕು ಎಂದರು. ಡಾ. ದಿನೇಶ ನಾಶಿಪುಡಿ ಸಹ ಕೂಡಲೇ ಹೆಸ್ಕಾಂ ಕೆಲಸ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಶಾಸಕ ಫಿರೋಜ್ ಸೇಠ್ ಹೆಸ್ಕಾಂ ಇಲಾಖೆ ಹಾಳಾಗುವ ರಸ್ತೆಗಳ ಮರು ನಿರ್ಮಾಣದ (Restoration of Damage) ಹಣ ಸಂದಾಯ ಮಾಡುವಂತೆ ನೋಡಿಕೊಳ್ಳಬೇಕು ಎಂದರು. HT line cable ಹಾಕುವಾಗ Restoration Charge ಪಾಲಿಕೆಗೆ ಕಟ್ಟಿದಿಕೊಳ್ಳಬೇಕು. ನಗರದಲ್ಲಿ ಅಳವಡಿಸಲಾದ ಬಟ್ಟಿಂಗ್-ಬ್ಯಾನರ್-ಹೋರ್ಡಿಂಗ್ ಬಾಡಿಗೆ ಸರಿಯಾಗಿ ಆಕರಿಸಬೇಕು. ಕಂದಾಯ ಸಾಕಷ್ಟು ಆಕರಿಸಲಾಗುತ್ತಿದೆಯೇ, ದೊಡ್ಡವರು ಬಾಡಿಗೆ ಕಟ್ಟಲು ಜಾರಿಕೊಳ್ಳುತ್ತಿದ್ದಾರೆ ಎಂದು ಫಿರೋಜ್ ಸೇಠ್ ಆಗ್ರಹಿಸಿದರು. ಕಿರಣ ಸಾಯನಾಯಕ ಆಕ್ಷೇಪಿಸಿ ಅಜೆಂಡಾ ಪ್ರಕಾರ ಸಭೆ ನಡೆಯಲಿ ಶಾಸಕರು ಬೇರೆ ವಿಷಯ ಎತ್ತುವುದು ಬೇಡ ಎಂದು ಆಗ್ರಹಿಸಿದಾಗ ಶಾಸಕ ಫಿರೋಜ್ ಸೇಠ್ ಮತ್ತು ಸಾಯನಾಯಕ ಅವರ ನಡುವೆ ಬಿರುಸಿನ ವಾದ ಉಂಟಾಯಿತು. ಮಹಾಪೌರೆ ಸಂಜೋತಾ ಬಾಂದೇಕರ ರೂಲಿಂಗ್ ನೀಡಿ ಸದ್ಯ ಚಾಲ್ತಿಯಲ್ಲಿರುವ ವಿಷಯದ ಬಗ್ಗೆ ಚರ್ಚೆ ಮಾಡೋಣ ಎಂದು ಶಾಸಕ ಫಿರೋಜ್ ಸೇಠ್ ಅವರಿಗೆ ತಿಳಿಸಿದರು.

ಕಮಿಷ್ನರ್ ಕುರೇರ ಅವರನ್ನು ಪ್ರಶ್ನಿಸಿದ ಶಾಸಕ ಫಿರೋಜ್ ಸೇಠ್ ಹಾಳಾದ ರಸ್ತೆಗಳನ್ನು ಪರಿಶೀಲಿಸಿದ್ದೀರಾ, ಹಾಳಾದ ರಸ್ತೆಗಳ ಮರುನಿರ್ಮಾಣ ಹಣ ಅವರಿಂದ ಪಡೆದಿದ್ದೀರಾ, ನೀವು ಹೆಸ್ಕಾಂ. ಮತ್ತು ಗುತ್ತಿಗೆದಾರರಿಗೆ ಈ ಬಗ್ಗೆ ಪತ್ರ ಬರೆದಿದ್ದೀರಾ ಎಂದು ಕಮಿಷ್ನರ್ ಕುರೇರಗೆ ತರಾಟೆಗೆ ತೆಗೆದುಕೊಂಡರು. HT line ಕೆಲಸದ ರಸ್ತೆ ಹಾಳಾದ restoration ಕೆಲಸ ನಮಗೆ ಸಮಾಧಾನ( satisfaction) ತಂದಿಲ್ಲ ಎಂದು ಕುರೇರ ತಿಳಿಸಿದರು.
HT line, gas pipeline ನಿಂದ ನಗರದ ರಸ್ತೆಗಳು ಹಾಳಾಗಿವೆ, ಇದರಿಂದ ಪಾಲಿಕೆ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆಗಳು ತಗ್ಗು ಬಿದ್ದು ಹಾಳಾಗಿದ್ದು ಸ್ವತಃ ಪಾಲಿಕೆ ಮೌನವಹಿಸಿದರೆ ಹೇಗೆ ಎಂದು ಸಭೆ ಖೇದ ವ್ಯಕ್ತಪಡಿಸಿತು.

ಪಾಲಿಕೆ ಆಯುಕ್ತ ಶಶಿಧರ ಕುರೇರ ಸಭೆಗೆ ಮಾಹಿತಿ ನೀಡಿ; ಸರಕಾರದ ಆಶಯದಂತೆ 980ಕಿಮೀ HT line ₹380ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲಿ ಮಾಡಲಾಗುತ್ತಿದೆ. ₹168 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಅಡಿ LT line ಸಹ ಬೆಳಗಾವಿ ನಗರದಲ್ಲಿ ಹಾಕಲಾಗುತ್ತಿದೆ. ಇತ್ತೀಚೆಗೆ ಮಾಡಲಾದ ನಗರದ ಉತ್ತಮ ರಸ್ತೆಗಳನ್ನು ಈಗ ಅಗೆದು ಹಾಳು ಮಾಡಲಾಗಿದೆ. ಕೂಡಲೇ restoration cost ಗುತ್ತಿಗೆದಾರರು ಮತ್ತು ಹೆಸ್ಕಾಂ ನಿಂದ ಆಕರಿಸಿ ರಸ್ತೆಗಳನ್ನು ನಿರ್ನಿಸಿ ಎಂದು ಸಭೆ ಒಕ್ಕೂರಲಿನಿಂದ ಆಗ್ರಹಿಸಿತು.

ತಗ್ಗು ಕಾರಣ: ಹೆಸ್ಕಾ RTO ವೃತ್ತದಲ್ಲಿ ರಸ್ತೆ ಅಗೆದದ್ದರಿಂದ ನಿನ್ನೆ ಯುವಕನೊಬ್ಬ ಅಪಘಾತಕ್ಕೆ ಬಲಿಯಾದ ಎಂದು ಸದಸ್ಯ ಡಾ. ದಿನೇಶ ನಾಶಿಪುಡಿ ಸಭೆಯಲ್ಲಿ ಆರೋಪಿಸಿ ಆತಂಕ ವ್ಯಕ್ತಪಡಿಸಿದರು.