SHARE

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿ ಒಟ್ಟು ಐವರು ಕೆಎಎಸ್ ಅಧಿಕಾರಿಗಳಿಗೆ ಸರಕಾರ ಜಿಲ್ಲೆಯಿಂದ ಇಂದು ಗೇಟ್ ಪಾಸ್ ನೀಡಿದೆ.

ಆಯುಕ್ತ ಶಶಿಧರ ಕುರೇರ ಅವರನ್ನು ಸರಕಾರ ಬಾಗಲಕೋಟ ಅಪರ ಜಿಲ್ಲಾಧಿಕಾರಿ(ಎಡಿಸಿ)ಯಾಗಿ ವರ್ಗಾವಣೆಗೊಳಿಸಿ ಇಂದು ಆದೇಶ ಹೊರಡಿಸಿದೆ. ಸ್ಮಾರ್ಟ್ ಸಿಟಿ ಎಂಡಿ ಹಾಗೂ ಆಯುಕ್ತರಾಗಿದ್ದ ಕುರೇರ ಸುಮಾರು ಮೂರು ವರ್ಷ ನಗರದಲ್ಲಿ ಬುಡಾ & ಪಾಲಿಕೆಗೆ ಸೇವೆ ಸಲ್ಲಿಸಿದ್ದಾರೆ.

ಚಿಕ್ಕೋಡಿ ಎಸಿಯಾಗಿದ್ದ ಗೀತಾ ಕೌಲಗಿ ಕೆ-ಶಿಪ್ ಇಲಾಖೆಗೆ, ಬೆಳಗಾವಿ ಎಸಿ ಕವಿತಾ ಯೋಗಪ್ಪನವರ ಅವರನ್ನು ಪ್ರಧಾನ ವ್ಯವಸ್ಥಾಪಕಿ-ಹೆಸ್ಕಾಂ ಹುಬ್ಬಳ್ಳಿಗೆ, ನಗರ ಬುಡಾ ಆಯುಕ್ತ ಶಕೀಲ್ ಅಹ್ಮದ್ ಅವರನ್ನು ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಮಿಷ್ನರ್ ಆಗಿ ಹಾಗೂ ಪ್ರೀತಂ ನಸಲಾಪುರೆ ಅವರನ್ನು ಬಸವಕಲ್ಯಾಣ ಎಸಿಯಾಗಿ ಸರಕಾರ ವರ್ಗಾವಣೆಗೊಳಿಸಿದ್ದು, ಒಟ್ಟು ಐವರು ಜಿಲ್ಲೆಯಿಂದ ಹೊರಬಿದ್ದಂತಾಗಿದೆ.