SHARE

ಬೆಳಗಾವಿ: ನಿನ್ನೆ ನಡೆದ ದೇವರ ದಾಸಿಮಯ್ಯ ಜಯಂತಿ ವೇಳೆ ವಡಗಾವಿ ರಸ್ತೆಯೊಂದಕ್ಕೆ ಅಳವಡಿಸಲಾಗಿದ್ದ ಕನ್ನಡ ರಸ್ತೆ ನಾಮಫಲಕ ಪೊಲೀಸರು ಕಿತ್ತು ಹಾಕಿದ್ದಾರೆ, ಎಂಇಎಸ್ ಜತೆಗೆ ಪೊಲೀಸರು ಸಹ ಕೈ ಜೋಡಿಸಿದ್ದಾರೆ ಎಂದು ಸರ್ವೋದಯ ಸ್ವಯಂ ಸೇವಾ ಸಂಘಟನೆ ಹಾಗೂ ನೇಕಾರರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ಹಾಗೂ ಹಿರಿಯ ಹೋರಾಟಗಾರ ರಾಮಚಂದ್ರ ಢವಳಿ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರ ನೇಕಾರರು ಮತ್ತು ಕನ್ನಡಿಗರಿಗೆ ತೀವೃ ಅನ್ಯಾಯ ಮಾಡಿದೆ ಎಂದು ಸರಕಾರದ ವಿರುದ್ಧ ‘ಹೊಯ್ಯುಕೊಂಡು’ ಘೋಷಣೆ ಕೂಗಿದರು. ಡಿಸಿಪಿ ಮಹಾನಿಂಗ ನಂದಗಾವಿ ಸಮಸ್ಯೆಗೆ ಪರಿಹಾರ ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.