SHARE

ಬೆಳಗಾವಿ: ಅತ್ತ ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಚುನಾವಣಾ ದಿನಾಂಕ ಘೋಷಿಸುತ್ತಿದ್ದಂತೆ ಇತ್ತ ಬೆಳಗಾವಿ ಜಿಲ್ಲಾಧಿಕಾರಿ ಜಿಲ್ಲಾಡಳಿತದ ಚುನಾವಣಾ ಸಿದ್ಧತೆ ಬಗ್ಗೆ ಮಾಹಿತಿ ಹಂಚಿಕೊಂಡರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಏಪ್ರಿಲ್ 24 ಹಾಗೂ ಅಭ್ಯರ್ಥಿ ನಾಮಪತ್ರ ಹಿಂದೆ ಪಡೆಯಲು ಏಪ್ರಿಲ್ 27 ಕೊನೆಯ ದಿನವಾಗಿದೆ, ಮತದಾನ ಮೇ 12ರಂದು ನಡೆಯಲಿದೆ, ಫಲಿತಾಂಶ- ಮೇ 15 ರಂದು ನಿಗದಿಪಡಿಸಲಾಗಿದೆ. ಅದರಂತೆ ಮತದಾನದ ಅವಧಿ- ಬೆಳಗ್ಗೆ 8ರಿಂದ ಸಂಜೆ 5 ರವರೆಗೆ ನಡೆಯಲಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 4404 ಬೂತಗಳನ್ನು ನಿಗದಿಪಡಿಸಲಾಗಿದೆ.
ಪ್ರತಿ ಕ್ಷೇತ್ರಗಳಿಗೆ ಒಬ್ಬರಂತೆ Model Code of Conduct Nodal Officers ಗಳನ್ನು ನೇಮಕ ಮಾಡಲಾಗಿದೆ, ಜಿಲ್ಲೆಯಲ್ಲಿ 36,57,541 ಜನ ಮತದಾರರ ಪಟ್ಟಿಯಲ್ಲಿದ್ದು, ಅವರಿಗೆ ಮತ ಚಲಾಯಿಸಲು ಯಾವುದೆ ತೊಂದರೆ ಉಂಟಾಗದಂತೆ ಕುಡಿಯುವ ನೀರು ಸೇರಿದಂತೆ ‌ಇನ್ನಿತರ ಮೂಲ ಸೌಕರ್ಯಗಳ ವ್ಯವಸ್ಥೆ ಬೂತಗಳಲ್ಲಿ ಕಲ್ಪಿಸಲಾಗಿದೆ. ಇನ್ನು ಚುನಾವಣಾ ಸಂದರ್ಭದಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಜಿಲ್ಲೆಯ ಗಡಿ ಪ್ರದೇಶದಲ್ಲಿ ಚೆಕ್ ಪೊಸ್ಟಗಳನ್ನು ಬಿಗಿಗೊಳಿಸಲಾಗುವುದು ಎಂದರು. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವುದೇ ಕಾರ್ಯಕ್ರಮ ಹಾಗೂ ಇನ್ನಿತರ ಜಾತ್ರೆಗಳನ್ನು ನಡೆಸಬೇಕಾದರೆ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಯ ಪೂರ್ವ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವೆಂದು ತಿಳಿಸಿದ‌ ಜಿಲ್ಲಾಧಿಕಾರಿ ಯಾವುದೇ ನಗದು ವ್ಯವಹಾರ ನಡೆಸಬೇಕೆಂದರೆ ಗರಿಷ್ಠ 50 ಸಾವಿರ ರೂಪಾಯಿ ವರೆಗೂ ವ್ಯವಹಾರ ನಡೆಸಬಹುದು ಎಂದರು.

ಅಬ್ಬರ ಪ್ರಚಾರಕ್ಕೆ ಕಡಿವಾಣ: ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಮುದ್ರಣ, ವಿದ್ಯುನ್ಮಾನ ಮಾಧ್ಯಮದಲ್ಲಿ ಜಾಹಿರಾತು ನೀಡಬಯಸಿದರೆ ಜಿಲ್ಲಾಡಳಿತ ಅನುಮತಿ ಅಗತ್ಯ. ಅದಲ್ಲದೆ‌ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅನುಮತಿ ಪಡೆಯದೆ ಪ್ರಚಾರ ಮಾಡುವಂತಿಲ್ಲ ಎಂದು ಸ್ಪಷ್ಠಪಡಿಸಿದರು.