SHARE

ಬೆಳಗಾವಿ: ವಿಧಾನಸಭೆ ಚುನಾವಣಾ ಭದ್ರತೆ ಹಿನ್ನೆಲೆಯಲ್ಲಿ ಕೇಂದ್ರಿಯ ಪಡೆಗಳು ಇಂದು ಬೆಳಗಾವಿಗೆ ಬಂದಿಳಿದಿವೆ.
ದೆಹಲಿ, ಗುಜರಾತ್, ಛತ್ತಿಸಗಢ ನಿಂದ ಸಿಆರ್ ಪಿಎಫ್, ಆರ್ ಪಿಎಫ್, ಬ್ಲ್ಯಾಕ್ ಕಮಾಂಡೊ ಪುರುಷರ ಪಡೆಗಳು ಇಂದು ರೈಲಿನ ಮೂಲಕ ಬೆಳಗಾವಿಗೆ ಆಗಮಿಸಿದರು.ನಂತರ ಭದ್ರತಾ ಪಡೆಯ ಯೋಧರ ಮೊದಲ ಪಡೆ ತಮ್ಮ ಸಾಮಾನು ಸರಂಜಾಮು ನೊಂದಿಗೆ ಲಾರಿಗಳಲ್ಲಿ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿತು. ಮಧ್ಯಾಹ್ನ ಎರಡನೇ ತಂಡ ಆಗಮಿಸಲಿದೆ.ಚುನಾವಣಾ ಕಣ ತೀಕ್ಷ್ಣಗೊಳ್ಳುತ್ತಿದ್ದು ಅಹಿತಕರ ಘಟನೆಗಳು ನಡೆಯದಂತೆ ಪಾರದರ್ಶಕ ಮತದಾನಕ್ಕಾಗಿ ಭಾರತೀಯ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ.