SHARE

ಬೆಳಗಾವಿ: ಜಿಲ್ಲೆಯ ಹಿರಿಯ ನ್ಯಾಯವಾದಿ ಎಂ. ಬಿ. ಝಿರಲಿ ಮೇಲೆ ಖಡೇಬಜಾರ ಪೊಲೀಸರು ಶಾಂತತಾ ಭಂಗ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿ ಬಾರ್ ಅಸೋಸಿಯೇಶನ್ ಇಂದು ಡಿಸಿ ಕಚೇರಿ ಎದುರು ರಸ್ತೆ ತಡೆ ನಡೆಸಿತು.ಸುಳ್ಳು ಕೇಸ್ ದಾಖಲಿಸಿದ ಬಗ್ಗೆ ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಅವರ ಗಮನ ಸೆಳೆದರೂ ಆಯುಕ್ತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿ ಎಇಸಿಗೆ ಮನವಿ ಕೊಡಲು ಯತ್ನಿಸಿದಾಗ ಡಿಸಿಪಿ ಬಿ. ಎಸ್. ಪಾಟೀಲ ಮತ್ತು ವಕೀಲರ ಮಧ್ಯೆ ಮಾತಿನ ಚಕಮಕಿ ನಡೆದು ನಂತರ ವಕೀಲರು ರಸ್ತೆ ತಡೆ ನಡೆಸಿದರು.ಡಿಸಿ ಕಚೇರಿ ಎದುರು ರಸ್ತೆ ತಡೆ ನಡೆದಾಗ ಮದುಮಕ್ಕಳ ಕಾರ್ ಟ್ರಾಫಿಕನಲ್ಲಿ ಸಿಕ್ಕು ವೇದನೆ ಆಯಿತು. ಮದುವೆ ಮಹೂರ್ತ ಲೇಟ್ ಆಗುತ್ತಿರುವ ಬಗ್ಗೆ ವಧು-ವರರು ಚಿಂತಿತರಾಗಿದ್ದಾಗ ವಿಷಯ ತಿಳಿದ ವಕೀಲರು ಮದುಮಕ್ಕಳ ಕಾರ್ ಹೊರಡಲು ಅನುವು ಮಾಡಿದರು.

ನಂತರ ಎಡಿಸಿ ಡಾ. ಬೂದೆಪ್ಪ ಆಗಮಿಸಿ ವಕೀಲರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಹಿರಿಯ ವಕೀಲನ ಮೇಲೆ ಆದ ಕೇಸ್ ಬಗ್ಗೆ ವಕೀಲರು ತೀವೃ ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ಹರ್ಷವರ್ಧನ ಪಾಟೀಲ, ರತನ್ ಮಾಸೇಕರ ಎಂಬ ವಕೀಲರ ಮೇಲೆ ಆದ ಪೊಲೀಸ್ ಕೇಸ್ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು.