SHARE

ಖಾನಾಪುರ: ನಮ್ಮ ಕುಮಾರಣ್ಣನ ‌ಸರಕಾರ ಅಧಿಕಾರಕ್ಕೆ ಬಂದ ೨೪ಗಂಟೆಗಳಲ್ಲಿ ರೈತರ ಮತ್ತು ಮಹಿಳಾ ಸಂಘದ ಸದಸ್ಯರ ಸಂಪೂರ್ಣ ಸಾಲಮನ್ನಾ ಆಗುತ್ತದೆ. ಆದ್ದರಿಂದ ಇದೊಂದು ಬಾರಿ ಖಾನಾಪುರದಲ್ಲಿ ನಾಸೀರ ಬಾಗವಾನ ಅವರಿಗೆ ಎಂ.ಎಲ್.ಎ‌ ಮಾಡಿ ಜೆಡಿಎಸ್ ಪಕ್ಷವನ್ನು ಬಲಪಡಿಸೋಣ ಎಂದು ಹಿರಿಯ ರಾಜಕಾರಣಿ ಜೆಡಿಎಸ್ ಮುಖಂಡ ಸಿ.ಬಿ.ಅಂಬೋಜಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಸುರಪುರ ಕೇರವಾಡ, ಭೂರಣಕಿ, ಮಾಸ್ಕೆನಟ್ಟಿ, ಹಿರೇಕರದಡ್ಡಿ, ಘಸ್ಟೋಳ್ಳಿ ಹಾಗೂ ವಿವಿಧ ಭಾಗಗಳಲ್ಲಿ ಶನಿವಾರ ದಿನದಂದು ಭರ್ಜರಿ ಪ್ರಚಾರದಲ್ಲಿ ಮಾತನಾಡಿದರು.

ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿರುವ ಸಂಧರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ನಾಸೀರ ಬಾಗವಾನ, ಹಿರಿಯರಾದ ರಿಯಾಜ ಪಟೇಲ, ಎಮ್.ಎಮ್.ಸಾಹುಕಾರ, ಮಹಾಂತೇಶ ಸಂಬರಗಿ, ಲಾಯಕಲಿ ಬಿಚ್ಚುನ್ನವರ, ಮಕಬೂಲ‌ ಸನದಿ, ಜೆಡಿಎಸ್ ಮುಖಂಡರಾದ ಬಸನಗೌಡಾ ಪಾಟೀಲ, ಬಸವರಾಜ ತುರಮುರಿ, ಬಸನ್ನಾ ಪುಂಡಿ, ಜಯಶ್ರೀ ಸೂರ್ಯವಂಶಿ, ಅಜೀಜ ಗಿರಿಯಾಲ,‌ ಅಶ್ರಫ ‌ಹೊಸುರ, ಶಭ್ಭಿರ ಕಿತ್ತೂರ, ಮುಬಾರಕ ಕಿತ್ತೂರ ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.