SHARE

ಬೆಳಗಾವಿ: 4 ಲಕ್ಷ ಜನರನ್ನು ಸೇರಿಸಿ ಬೆಂಗಳೂರಲ್ಲಿ ಬೃಹತ ಸಭೆ ಮಾಡಿ ಕ್ಯಾಬಿನೆಟ್ ವಿಸ್ತರಿಸುವೆ ಎಂದು ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಸಿಎಂ ಆಗಿ ಮೊದಲ ಸುದ್ದಿಗೋಷ್ಠಿ ನಡೆಸಿದ ಅವರು ರೈತರ ಹಾಗೂ ನೇಕಾರರ ರಾಷ್ಟ್ರೀಯ ಹಾಗೂ ಸಹಕಾರಿ ಸಾಲ ಮನ್ನಾ ಮಾಡಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿ ಚರ್ಚೆ ನಡೆಸಲಾಗಿದೆ ಎಂದರು.

ರಾಷ್ಟ್ರೀಯ ಪಕ್ಷ ಬಿಜೆಪಿ ತನ್ನ ಬಹುಮತ ಸಾಬೀತು ಪಡಿಸುತ್ತದೆ ಎಂದು ಪದೇ ಪದೇ ಭರವಸೆ ವ್ಯಕ್ತಪಡಿಸಿರುವ ಯಡಿಯೂರಪ್ಪ ಶುಕ್ರವಾರ-ಶನಿವಾರದ ಎರಡು ದಿನಗಳ ಕಾಯ್ದು ನೋಡುವ ತಂತ್ರ ಹೂಡಿದ್ದಾರೆ. ಪ್ರಧಾನಿ ಮೋದಿ, ಅಮಿತ ಶಾ ಸೇರಿ ವರಿಷ್ಠ ನಾಯಕರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಸಮಾವೇಶದ ಮೂಲಕ ಕ್ಯಾಬಿನೆಟ್ ವಿಸ್ತರಣೆ ಮಾಡಲಾಗುವುದು ಎಂದರು. ಜನರ ಪಕ್ಷ ಬಿಜೆಪಿ ಸರಕಾರ ರಚಿಸಲು ಅವಕಾಶ ನೀಡದೆಯೇ ಚುನಾವಣೆ ನಂತರ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡುಕೊಂಡು ಅಧಿಕಾರ ಕಬಳಿಕೆ ಮಾಡಲೆತ್ನಿಸುತ್ತಿದ್ದಾರೆ ಎಂದು ಬಿಎಸ್ವೈ ಆರೋಪಿಸಿದರು.