SHARE

ಬೆಳಗಾವಿ: ಪ್ರಧಾನಿ ಮಂತ್ರಿ ಉಜ್ವಲಾ ಯೋಜನೆ ಸದ್ಭಳಕೆ ಮಾಡಿಕೊಳ್ಳುವಂತೆ ಸಂಸದ ಸುರೇಶ ಅಂಗಡಿ ಜನತೆಗೆ ಕೋರಿದ್ದಾರೆ. ಬಡ ಫಲಾನುಭವಿಗಳಿಗೆ ಉಚಿತ ಅಡುಗೆ ಗ್ಯಾಸ್ ಕೊಡುವ ಯೋಜನೆ ಇದೆ. ಎಸ್ ಸಿ/ ಎಸ್ ಟಿ ಸಮುದಾಯದ ಹೆಣ್ಣುಮಕ್ಕಳು ಈ ಯೋಜನೆ ಮೂಲಕ ಗ್ಯಾಸ್ ಕನೆಕ್ಷನ್ ಪಡೆಯಬೇಕು. ಉಜ್ವಲಾ ಪ್ಲಸ್ ಯೋಜನೆಯಡಿ ಸಂಬಂಧಿಸಿದ ಗ್ಯಾಸ್ ಡೀಲರಗಳು ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಒಲೆಯ ಸಹಿತ ಒದಗಿಸಬೇಕೆಂದು ಸಂಸದ ಸುರೇಶ ಅಂಗಡಿ ಸೂಚಿಸಿದ್ದಾರೆ. ಇಂದು ತಮ್ಮ ನಿವಾಸದಲ್ಲಿ ಮಾತನಾಡಿ ಅಂತ್ಯೋದಯ ಯೋಜನೆ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆ ಎಚ್ ಪಿ ಇಲ್ಲವೇ ಇಂಡೇನ್ ಗ್ಯಾಸ್ ಏಜೆನ್ಸಿಗಳಿಗೆ ಫೊಟೋ, ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ನೀಡಿ ಯೋಜನೆ ಪಡೆಯುವಂತೆ ಸುರೇಶ ಅಂಗಡಿ ಕೋರಿದ್ದಾರೆ. ರಾಜು ಚಿಕ್ಕನಗೌಡ್ರ, ಪ್ರಭು ಹೂಗಾರ, ಗುರುಪಾದ ಕಳ್ಳಿ ಇತರರು ಉಪಸ್ಥಿತರಿದ್ದರು.