SHARE

ವಿಶೇಷ ಬರಹ: ಅಶೋಕ್ ಚಂದರಗಿ

ಬೆಳಗಾವಿಯಿಂದ ಹಿಂಡಲಗಿಗೆ ಹೋಗುವ ರಸ್ತೆಯಲ್ಲಿ,ಕ್ಯಾಂಪ್ ಪ್ರದೇಶಕ್ಕೆ ತಿರುಗುವ ಕ್ರಾಸ್ ನಲ್ಲಿ ಸ್ಥಾಪಿಸಲಾಗಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆಯ ಬಗ್ಗೆ ಒಬ್ಬೊಬ್ಬರೆ ಕಾಳಜಿ ವಹಿಸುತ್ತಿದ್ದಾರೆ.ಸದಾಶಿವನಗರದ ಶ್ರೀ ಶೇಖರ ಪಾಟೀಲ ಎಂಬವರು ಪತ್ನಿ,ಮಕ್ಕಳು ಸಮೇತ ಬಂದು ಪ್ರತಿಮೆಯ ಸುತ್ತಲಿನ ಕಸವನ್ನೆಲ್ಲ ತೆಗೆದು ಹಾಕಿ ಸ್ವಚ್ಛಗೊಳಿಸಿದ್ದನ್ನು ಕಳೆದ ತಿಂಗಳಷ್ಟೆ ಬರೆದಿದ್ದೇನೆ.ಈಗ ನೋಡಿದರೆ ಆ ಜಾಗೆಯಲ್ಲಿ ಹೂಗಿಡಗಳನ್ನು ನೆಡಲಾಗಿದೆ.ಅಲ್ಲಿಲ್ಲಿ ವಿಚಾರಿಸಿದೆ. ಲೋಕೋಪಯೋಗಿ ಇಲಾಖೆಯ ಬೆಳಗಾವಿ ವೃತ್ತದ ಅಧೀಕ್ಷಕ ಶ್ರೀ ಸುರೇಶ ಅವರು ಕಾಳಜಿ ವಹಿಸಿ ಈ ಹೂಗಿಡಗಳನ್ನು ನೆಡೆಸಿದ್ದಾರೆ.ಮೈಸೂರು ಮೂಲದವರಾದ ಅವರು ಹನುಮಾನನಗರ ನಿವಾಸಿಯಾಗಿದ್ದಾರೆ.ನಿತ್ಯ ಮನೆಗೆ ಹೋಗಿ ಬರುವಾಗ ಪ್ರತಿಮೆಯನ್ನು ಹಾಗೂ ಸುತ್ತಲಿನ ಸ್ಥಿತಿಯನ್ನು ಗಮನಿಸಿ ಈ ಕೆಲಸ ಮಾಡಿದ್ದಾರೆ. ಕತ್ತಲಿನಲ್ಲಿ ಗಾಂಧೀಜಿಯ ಪ್ರತಿಮೆ ಕಾಣಿಸುವದೇ ಇಲ್ಲ. ಅಲ್ಲಿ ವಿದ್ಯುತ್ ದೀಪದ ವ್ಯವಸ್ಥೆಯನ್ನೂ ಸುರೇಶ ಮಾಡಲಿದ್ದಾರಂತೆ. ಪ್ರತಿಮೆಯ ಸುತ್ತಲೂ ಗ್ರಿಲ್ ಹಾಕಿದರೆ ಪ್ರತಿಮೆಯ ಸುರಕ್ಷತೆಯ ದೃಷ್ಟಿಯಿಂದ ಇನ್ನೂ ಒಳ್ಖೆಯದು. ಸುರೇಶ ಅವರಿಗೆ ನನ್ನದೊಂದು ಸಲಾಂ.