SHARE

ಬೆಳಗಾವಿ: ದಲಿತ ವರ್ಗದ ಅಧಿಕಾರಿಗಳ ಮೇಲೆ ನಡೆಯುತ್ತಿರುವ ಸತತ ದಬ್ಬಾಳಿಕೆ ಮತ್ತು ಕಾನೂನು ಬಿಕ್ಕಟ್ಟಿನ ಸಂದರ್ಭ ಸಂಕಷ್ಟದಲ್ಲಿ ಸಿಲುಕಿರುವ ನೌಕರರ ಸಹಾಯಕ್ಕೆ ಈ ಸಮಾಜದಿಂದ ಆಯ್ಕೆಯಾದ ಯಾವ ಶಾಸಕರು ಮುಂದೆ ಬರುತ್ತಿಲ್ಲ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತ ಮೀಸಲಾತಿ ಕ್ಷೇತ್ರಗಳಿಂದ ಆಯ್ಕೆಯಾದ ಸಂಸದ ಶಾಸಕರು ಧ್ವನಿ ಎತ್ತುತ್ತಿಲ್ಲ. ಕುಡಚಿ ಶಾಸಕ ಪಿ. ರಾಜೀವ ಮಾತ್ರ ಸದನದಲ್ಲಿ ಧ್ವನಿ ಎತ್ತಿದ್ದಾರೆ ಎಂದರು. ಎಸ್ ಸಿ/ ಎಸ್ ಟಿ ಕ್ಷೇತ್ರಗಳಿಂದ ಆಯ್ಕೆಯಾದ ಶಾಸಕ ಸಂಸದರಿಂದ ಸಮಾಜಕ್ಕೆ ಯಾವುದೇ ಲಾಭ ಇಲ್ಲ. ತಮ್ಮ ಸ್ವ ಅಧಿಕಾರ ಲಾಲಸೆಗಾಗಿ, ಹಣ ಗಳಿಸುವ ಉದ್ದೇಶಕ್ಕೆ ಮಾತ್ರ ಇಂತಹವರು ಆಯ್ಕೆಯಾಗಿದ್ದು ಸಮಾಜದ ಜನತೆ ಇಂತಹವರನ್ನು ದೂರ ಇಡಬೇಕು ಎಂದರು. ರಾಹುಲ ಮೇತ್ರಿ, ಕಲ್ಲಪ್ಪ ಕಾಂಬಳೆ, ಗೌತಮ ಪಾಟೀಲ, ಸಿದ್ದಪ್ಪ ಕಾಂಬಳೆ, ಅಶೋಕ ಐನವರ, ಮಹಾಲಿಂಗಪ್ಪ ಕೋಲಕಾರ ಇತರರು ಉಪಸ್ಥಿತರಿದ್ದರು.