SHARE

ಬೆಳಗಾವಿ: ಯಡಿಯೂರಪ್ಪ ಮತ್ತೆ ಸಿಎಂ ಆಗಬೇಕು ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ದೈವಿಶಕ್ತಿಯ ಮೊರೆ ಹೋಗಿದ್ದಾರೆ. ಗೋಕಾಕ ತಾಲೂಕಿನ ಕಲ್ಲೊಳ್ಳಿಯಲ್ಲಿ ನಡೆದ 47ನೇ ವೇದಾಂತ ಪರಿಷತ್ ಅಂಗವಾಗಿ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ವಸತಿ ನಿಲಯ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಮಠಮಾನ್ಯಗಳಿಗೆ ಅನುದಾನ ಸಿಕ್ಕಿತ್ತು. ಅದರಂತೆ ಬಿಎಸ್ವೈ ಅವರು ಮುಖ್ಯಮಂತ್ರಿ ಆದರೆ ಕಲ್ಲೊಳ್ಳಿ ದೇವಸ್ಥಾನಕ್ಜೆ ಕರೆದುಕೊಂಡು ಬರುವೆ ಎಂದು ಜನತೆಗೆ ಅಭಯ ನೀಡಿದ್ದಾರೆ. ಆಶ್ಯಾತ್ಮ ಮತ್ತು ದೇಶಿ ಸಂಸ್ಕ್ರತಿ ಎಡೆಗೆ ಯುವಕರ ಗಮನ ಕಡಿಮೆಯಾಗಿದ್ದು, ಪಾಶ್ಚಾತ್ಯ ಸಂಸ್ಕ್ರತಿಯ ಜತೆಜತೆಗೆ ದೇಶಿ ಸಂಸ್ಕ್ರತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.