SHARE

ಬೆಳಗಾವಿ: ಏರ್ ಇಂಡಿಯಾ ಸಲಹೆ ಮತ್ತು ಸುಪರ್ಧಿಯಲ್ಲಿ ರಾಷ್ಟ್ರಪತಿ ಅವರಿಗೆ ಆಹಾರ ವ್ಯವಸ್ಥೆ ಮಾಡಲಾಯಿತು. ಆರೋಗ್ಯ ಅಧಿಕಾರಿಗಳು ತಯಾರಿಸಿದ ಆಹಾರವನ್ನು ಎಸ್ ಪಿಜಿ, ವಿಕ್ಷಣಾ ದಳ ಹಾಗೂ ಏರಫೋರ್ಸ್ ಅಧಿಕಾರಿಗಳ ಪರಿಶೀಲನೆ ನಂತರ ಆರೋಗ್ಯಾಧಿಕಾರಿಗಳು ರಾಷ್ಟ್ರಪತಿ ಆಪ್ತ ವಲಯಕ್ಕೆ ಆಹಾರವನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹಸ್ತಾಂತರಿಸಿದರು.ಸಲಾಡ್, ಬೆಳೆ ಹಲ್ವಾ( ಮೂಂಗ ಹಲ್ವಾ), ಅಣ್ಣ- ಸಾರು, ಸುಕ್ಕಾ ಚಪಾತಿ, ಜೀರಾರೈಸ್ ಒಳಗೊಂಡ ಸರಳ ಶುಧ್ಧ ಬೆಳಗಾವಿ ದೇಶಿ ಸ್ವಾಧದ ಆಹಾರ ಸಿದ್ದಪಡಿಸಿ ರಾಷ್ಟ್ರಪತಿ ದಂಪತಿಗೆ ನೀಡಲಾಗಿದ್ದು ವಿಮಾನದಲ್ಲೇ ಆಹಾರ ಸೇವನೆ ಮಾಡಲಿದ್ದಾರೆ.