SHARE

ನವದೆಹಲಿ: ನಟಿ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಟ್ವಿಟರ್ ಪೋಸ್ಟ್‌ವೊಂದಕ್ಕೆ ಸಂಭಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಮ್ಯಾ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೇಣದ ಪ್ರತಿಮೆಯ ಹಣೆಯ ಮೇಲೆ ಚೋರ್‌ ಎಂದು ಬಣ್ಣ ಬಳಿಯುತ್ತಿರುವ ಪೋಟೋವನ್ನು ಫೋಟೋಶಾಪ್​​ ಮಾಡಿ ಚೋರ್ ಪಿಎಂ ಚುಪ್ ಹೈ ಅಂತಾ ಕ್ಯಾಪ್ಶನ್ ನೀಡಿ ಟ್ವಿಟರ್​​ನಲ್ಲಿ ಶೇರ್‌ ಮಾಡಿದ್ರು. ಇದು ಸಾಮಾಜಿಕ ಕಾರ್ಯಕರ್ತನೋರ್ವನ ಕೆಂಗಣ್ಣಿಗೆ ಗುರಿಯಾಗಿದೆ.ಈ ಸಂಬಂಧ ರಮ್ಯಾ ವಿರುದ್ಧ ದೇಶದ್ರೋಹದ ಆರೋಪದಡಿ ಉತ್ತರಪ್ರದೇಶ ಗೋಮತಿನಗರ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದು, ಲಖನೌ ಮೂಲದ ವಕೀಲ ಸೈಯದ್ ರಿಜ್ವಾನ್​ ಅಹ್ಮದ್​​ ನಿನ್ನೆ ರಮ್ಯಾ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರೋ ಸೈಯದ್​, ಎಫ್​​ಐಆರ್​​ ಪ್ರತಿಯ ಫೋಟೋ ಹಂಚಿಕೊಂಡಿದ್ದಾರೆ. ಎಷ್ಟು ಬಾರಿ ಹೇಳಿದ್ರೂ ರಮ್ಯಾ ತಮ್ಮ ಟ್ವೀಟ್​​ ಡಿಲೀಟ್​ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದಾಗಿ ಸೈಯದ್​ ಹೇಳಿದ್ದಾರೆ.

ನನಗೆ ಬಿಜೆಪಿ ಮತ್ರು ಆರ್​ಎಸ್​ಎಸ್​ನೊಂದಿಗೆ ಯಾವುದೇ ಸಂಬಂಧಿವಿಲ್ಲ ಎಂದು ಸೈಯದ್​ ಸ್ಪಷ್ಟಪಡಿಸಿದ್ದು, ರಮ್ಯಾ ಮಾಡಿರುವ ಈ ಪೋಸ್ಟ್​ ದೇಶದ ಗಣತಂತ್ರ ಹಾಗೂ ಪ್ರಧಾನಿಯ ಮೇಲಿನ ದಾಳಿ ಎಂದು ಹೇಳಿದ್ದಾರೆ. ಈ ಸುದ್ದಿಗೆ ರಮ್ಯಾ,“ಓಹ್ ..! ಚೆನ್ನಾಗಿದೆ” ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.