SHARE

ಬೆಳಗಾವಿ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಅನ್ಯಾಯ ಎಂದು ಇಲ್ಲಿನ ಜನ ಬೊಬ್ಬೆ ಹೊಡೆದದ್ದಕ್ಕೆ ಪ್ರತಿಯಾಗಿ ಒಂಭತ್ತು ಕಚೇರಿಗಳ ಸ್ಥಳಾಂತರ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹಂಚಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ ಬೆಳಗಾವಿಗೆ ಮೂರೇ ಮೂರು ರಾಜ್ಯ ಕಚೇರಿಗಳು ದೊರೆತಿವೆ. ಕರ್ನಾಟಕ ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಸಕ್ಕರೆ ಆಯುಕ್ತರ ಆಯುಕ್ತಾಲಯ, ಮಾಹಿತಿ ಆಯುಕ್ತರಲ್ಲಿ ಒಬ್ಬರು ಬೆಳಗಾವಿಗೆ ಸೇರಿ ಮೂರು ನಾಮ ಬೆಳಗಾವಿಗೆ ಸಿಕ್ಕಿದೆ.

1)ಕೃಷ್ಣಾ ಜಲ ಭಾಗ್ಯ ನಿಗಮ ಆಲಮಟ್ಟಿ.
2)ಕರ್ನಾಟಕ ನೀರಾವರಿ ನಿಗಮ ದಾವಣಗೆರೆ.
3) ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಜಿಸಲಾಗಿದ್ದು, ಒಂದು ಕಚೇರಿ ಹುಬ್ಬಳ್ಳಿಗೆ.
4) ಪುರಾತತ್ವ ಇಲಾಖೆ ನಿರ್ದೇಶಕರ ಕಚೇರಿ ಹಂಪಿಗೆ, 5)ಮಾನವ ಹಕ್ಕುಗಳ ಆಯೋಗದ ಸದಸ್ಯರ ಪೈಕಿ ಧಾರವಾಡ.
6) ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರು ಗುಲಬರ್ಗಾ.
7)ಕರ್ನಾಟಕ ಉಪಲೋಕಾಯುಕ್ತರ ಪೈಕಿ ಒಬ್ಬರು ಧಾರವಾಡಕ್ಕೆ ಬರಲಿದ್ದಾರೆ.