SHARE

ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ಅದ್ಧೂರಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೆರವಣಿಗೆಗೆ ಸಚಿವ ಸತೀಶ ಜಾರಕಿಹೊಳಿ ಹಾಗೂ ಮೇಯರ್ ಬಸಪ್ಪ ಚಿಕ್ಜಲದಿನ್ನಿ ಡೊಳ್ಳು ಬಾರಿಸಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ಕುಮಾರ ಗಂಧರ್ವ ರಂಗಮಂದಿರದವರೆಗೆ ಸಾಗಿದ ಭವ್ಯ ಜಾಥಾ ವೇದಿಕೆ ಕಾರ್ಯಕ್ರಮವಾಯಿತು. ಶ್ರೀ ಸಿದ್ದರಾಮೇಶ್ವರ ನುಡಿನಮನ ಹಾಗೂ ಗಾಯನ & ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ, ಎಡಿಸಿ ಡಾ. ಎಚ್. ಬಿ. ಬೂದೆಪ್ಪ, ಶ್ರೀಶೈಲ ಕರಿಶಂಕರಿ ಹಾಗೂ ಗಣ್ಯರು ಭಾಗವಹಿಸಿದರು.