SHARE

ಬೆಳಗಾವಿ: ಜನಪರ ಜಿಪಂ. ಸಿಇಓ ಆಗಿ ಕಳೆದೆರಡು ವರ್ಷಗಳಿಂದ ಜಿಲ್ಲೆಯ ಜನಮಾಸದ ಗಮನ ಸೆಳೆದಿದ್ದ ಆರ್. ರಾಮಚಂದ್ರನ್ ಅವರನ್ನು ಸರಕಾರ ಬಾಗಲಕೋಟ ಡಿಸಿ ಆಗಿ ವರ್ಗಾಯಿಸಿದೆ. ಡಿ. 2016ರಲ್ಲಿ ಬೆಳಗಾವಿ ಜಿಪಂ. ಸಿಇಓ ಆಗಿ ಕೊಪ್ಪಳದಿಂದ ಆಗಮಿಸಿದ್ದ ಐಎಎಸ್ ಅಧಿಕಾರಿ ಆರ್. ರಾಮಚಂದ್ರನ್ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ, ಉದ್ಯೋಗ ಖಾತರಿ ಯೋಜನೆ ಜಾರಿ, ಗ್ರಾಮ ಸಡಕ್, ಕುಡಿಯುವ ನೀರಿನ ಯೋಜನೆಗಳ ಜಾರಿ, ನರೇಗಾ ಅಡಿ ನದಿ ಹೂಳೆತ್ತುವ ಕಾರ್ಯ, ಎಸ್ಸೆಸ್ಸೆಲ್ಸಿ- ಪಿಯುಸಿ ಫಲಿತಾಂಶ ಹೆಚ್ಚಿಸಲು ಹಾಗೂ ಆರೋಗ್ಯ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಯತ್ನಿಸಿದ್ದರು. ಸತತ ಜನಸಂಪರ್ಕಕ್ಕೆ ಸಿಗುತ್ತಿದ್ದ ಸಿಇಓ ಸೇವಾಜೇಷ್ಠತೆ ಮೇಲೆ ನೆರೆಯ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ತೆರಳಲಿದ್ದಾರೆ.