SHARE

ಬೆಳಗಾವಿ: ಜಿಪಂ. ಪೂರ್ವ ಸಿಇಓ ಆರ್. ರಾಮಚಂದ್ರನ ಅವರಿಗೆ ಇಂದು ಜಿಲ್ಲಾಡಳಿತದ ವತಿಯಿಂದ ಬೀಳ್ಕೊಡಲಾಯಿತು. ಬಾಗಲಕೋಟ ಜಿಲ್ಲಾಧಿಕಾರಿ ಆಗಿ ಕಳೆದ ವಾರ ಅಧಿಕಾರ ವಹಿಸಿಕೊಂಡ ಅವರು ಇಂದು ಬೀಳ್ಕೊಡುಗೆ ಸ್ವೀಕರಿಸಿ ತಮ್ಮ ಮಾತನ್ನು ಟ್ರಾಫಿಕ್ ವ್ಯವಸ್ಥೆಯಲ್ಲಿ ಸ್ವಸುರಕ್ಷೆಗೆ ಬಳಸಿಕೊಂಡರು. ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಅಸುನೀಗಿದ ಜಿಪಂ. CPO ಹಾಗೂ ಬೈಕ್ ಅಪಘಾತದಲ್ಲಿ ಅಸುನೀಗಿದ ಪಿಡಿಓ ಅವರ ಘಟನೆ ಉಲ್ಲೇಖಿಸಿ ಇಬ್ಬರೂ ಸೀಟ್ ಬೆಲ್ಟ್ ಮತ್ತು ಹೆಲ್ಮೇಟ್ ಧರಿಸದೆ ಜೀವ ಕಳೆದುಕೊಂಡಿದ್ದು ಖೇದ ಮೂಡಿಸಿದೆ ಎಂದರು. ಸ್ವರಕ್ಷಣೆಗೆ ಸರಕಾರಿ ಮಾರ್ಗದರ್ಶಿಗಳಿದ್ದು ಅವುಗಳನ್ನು ಚಾಚೂ ತಪ್ಪದೇ ಅನುಸರಿಸಬೇಕೆಂದು ಕರೆ ನೀಡಿದರು. ಸರಕಾರಿ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಬದ್ದತೆಯೇ ಉನ್ನತ ಸ್ಥಾನ ಮತ್ತು ಗೌರವ ನೀಡುತ್ತದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ, ಎಡಿಸಿ ಡಾ. ಎಚ್. ಬಿ. ಬೂದೆಪ್ಪ, ಕಮಿಷ್ನರ್ ಶಶಿಧರ ಕುರೇರ, ಬುಡಾ ಕಮಿಷ್ನರ್ ಪ್ರೀತಂ ನಸಲಾಪುರೆ, ಜಿಪಂ. ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ ಸೇರಿ ಜಿಲ್ಲೆಯ ಎಲ್ಲ ಹಿರಿಯ ಅಧಿಕಾರಿಗಳು ಸನ್ಮಾನಿಸಿ, ಅನಿಸಿಕೆ ಹಂಚಿಕೊಂಡು ಬೀಳ್ಕೊಟ್ಟರು. ಸರಕಾರಿ ಸಂಘ ಸಂಸ್ಥೆಗಳು ಸಹ ಸತ್ಕರಿಸಿದವು.