SHARE

ಬೆಳಗಾವಿ: ಸುಮಾರು 10 ವಾರ್ಡಗಳಿಗೆ ನಿರಂತರ ನೀರು ಪೂರೈಕೆಯಾಗುತ್ತಿದೆ‌. ಆದರೆ ಇನ್ನುಳಿದ 48 ವಾರ್ಡ್ ಗಳಿಗೆ ನೀರಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ನಗರದ ಜಯನಗರ, ಪ್ರೆಸ್ ಕಾಲೊನಿ ವಾರ್ಡ ನಂಬರ್ 31/32 ರಲ್ಲಿ ಹತ್ತು ದಿನಕ್ಕೊಮ್ಮೆ ನೀರನ್ನು ಬಿಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಲಂಡಳಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಬೆಳಗಾವಿ ಜನತೆಗೆ ಸರಿಯಾಗಿ ನೀರು ಪೂರೈಕೆ ಯಾಗದಿರುವುದಕ್ಕೆ ಕಾರಣ. ಜಲಮಂಡಳಿ ಅಧಿಕಾರಿಗಳು ಸ್ಪಂದಿಸಿಲ್ಲ. ಜಯನಗರ, ಪ್ರೆಸ್ ಕಾಲೊನಿಗೆ 8 ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ ಎಂದರು. ಮಹೇಶ್ ಬೊಸೆ, ಜೆ‌. ಕೆ. ಕಲಪತ್ರಾ, ಎನ್. ಸೈನಾಳ, ಬಿ ಶಿರಗಾಂವಿ, ಆರ್ ಕಬ್ಬೂರ, ಬಿ. ಎಸ್. ಗವಿಮಠ, ಎಸ್ ಕೋಲಕಾರ, ಎ ಕಾಮತೆ, ವ್ಹಿ ಹಿರೇಮಠ, ಆರ್ ಮಲ್ಲಾಪೂರ ಹಾಗೂ ಉಪಸ್ಥಿತರಿದ್ದರು.