SHARE

ಬೆಳಗಾವಿ : ಅಧಿಕಾರ ಬಳಸಿಕೊಂಡು ಕಡೋಲಿ ಗ್ರಾಮದಲ್ಲಿರುವ 40 ಮನೆಗಳನ್ನು ತೆರಳುಗೊಳಿಸಿ ಗ್ರಾಮಸ್ಥರನ್ನು ಬೀದಿಗೆ ತಂದಿರುವವರ ವಿರುದ್ಧ ಕ್ರಮ ಕೈಗೊಂಡು, ನ್ಯಾಯ ಕೊಡಿಸುವಂತೆ ಕಳವಳ ವ್ಯಕ್ತಪಡಿಸಿ ಗ್ರಾಮಸ್ಥರಿಂದ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಆವರಣದಲ್ಲಿ ಧರಣಿ ನಡೆಸಿ ಮಾದ್ಯಮದರ ಜೊತೆಗೆ ತಮ್ಮ ನೋವನ್ನು ತೊಂಡಿಕೊಂಡರು.
ಕಾನೂನು ನಿಯಮಗಳನ್ನು ಗಾಳಿಗೆ ತೂರಿ , ಒಂದೇ ದಿನದಲ್ಲಿ ಮನೆಗಳನ್ನು ನೆಲಸಮ ಮಾಡಿದ ಪಿಬ್ಲೂಡಿ ಅಧಿಕಾರಿಗಳ ವಿರುದ್ಧ ಸರಕಾರ ಕ್ರಮಕ್ಕೆ ಮುಂದಾಗಬೇಕು ಆಗ್ರಹಿಸಿದರು.
ಏಕಾಏಕಿಯಾಗಿ ಮನೆಗಳನ್ನು ತೆರವುಗೊಳಿಸಿದರೆ ಎಲ್ಲಿಗೆ ಹೋಗಬೇಕು, ಬಿಜೆಪಿ ಬೆಂಬಲಿಗರನ್ನು ಬೀದಿಗೆ ತರಬೇಕೆಂದು ಖಚಿತಪಡಿಸಿ. ಅಭಿವೃದ್ಧಿ ನೆಪದಲ್ಲಿ ಕಾಂಗ್ರೆಸ್‌ನವರು ಸೇಡಿನ ರಾಜಕಾರಣ ನಡೆಸುತ್ತಿದ್ದಾರೆ . ಇರುವ ಒಂದೂವರೆ ಕಿಲೋಮೀಟರ್ ರಸ್ತೆಗೆ 2 ಕೋಟಿ ರೂ. ಹಣವನ್ನು ರಸ್ತೆ ಕಾಮಗಾರಿಗೆ ಬಳಸಲಾಗಿದೆ. ಪಿಬ್ಲೂಡಿ ಅಧಿಕಾರಿಗಳು ಸಹ ಸಚಿವ ಕೈಗೊಂಬೆಯಾಗಿದ್ದಾರೆ, ಗ್ರಾಮಗಳ ಅಭಿವೃದ್ಧಿಯಲ್ಲಿ ಪಕ್ಷಗಳು ಬಳಸಿಕೊಳ್ಳುವುದು ಖಂಡನಿಯ, ಈಗಾಗಲೆ ಬೀದಿಗೆ ಬಂದಿರುವ ಬಡ ಕುಂಟುಂಬಗಳಿಗೆ ಸೂಕ್ತ ಪರಿಹಾರ ಕಲ್ಪಿಸಿ ಕೊಡಬೇಕೆಂದು ಗ್ರಾಮಸ್ಥರೂ ರೋಧನೆ ವ್ಯಕ್ತಪಡಿಸಿದರು.
ಇದರಲ್ಲಿ ದೇಶಯೋದನ ಮನೆಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗಿದೆ, ಯೋದ ಸೇವೆಯಲ್ಲಿ ಕಾರ್ಯನಿರ್ವಸುತ್ತಿದರೆ ಅವರ, ಮನೆಯವರ ಗಮನಕ್ಕೆ ತರದೆ ಯೋದನ ಮನೆಯನ್ನು ನೆಲಸಮ ಮಾಡಲಾಗಿದೆ, ಯೋದನ ತಂದೆ-ತಾಯಿಗೆ ದಿಕ್ಕೆ ತೊಚದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಜಯ ರುತಕೋಟೆ, ಸುಂದರ ಚೌಗಲೆ, ಶಂಕರ ಚಿಂಚನಗಿ, ಯಲ್ಲಪ್ಪ ಕೊಟಾರೆ, ಸುನೀಲ ಕಸಾರೆ, ಯಮುನಾ ಕೊಟಾರೆ ಹಾಗೂ ಉಪಸ್ಥಿತರಿದ್ದರು.