SHARE

ಬೆಳಗಾವಿ: ಲೋಕಸಭಾ ಚುನಾವಣಾ ಹಿನ್ನೆಲೆ ನೀತಿ ಸಂಹಿತೆಯನ್ನು ಜಾರಿಗೊಳಿಸಿ ಮೂರು ದಿನ ಕಳೆದರೂ ಬೆಳಗಾವಿಯಲ್ಲಿ ಜನಪ್ರತಿನಿಧಿಗಳ ಬ್ಯಾನರಗಳನ್ನು ತೆರವುಗೊಳಿಸುವ ಕಾರ್ಯ ನಿರಂತರವಾಗಿದ್ದು ಇಂದ ಕೂಡ ತೆರವು ಕಾರ್ಯ ಮುಂದುವರೆದಿದೆ. ನೀತಿ ಸಂಹಿತೆ ಜಾರಿಯಾಗಿ ಮೂರು ದಿನ ಕಳೆದಿದೆ ಜನಪ್ರತಿನಿದಿಗಳ ಪ್ರಚಾರ, ಮತದಾನ ಪ್ರಚಾರಕ್ಕೆ ಸಂಭಂದಿಸಿದಂತೆ ಯಾವುದೆ ಸಭೆ, ಸಮಾರಂಭಗಳನ್ನ ಮತ್ತು ಪ್ರಚಾರಕ ಬ್ಯಾನರಗಳನ್ನು ಮತ್ತು ಗೋಡೆಬರಹಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೆ ಬೆಳಗಾವಿಯಲ್ಲಿ ಪ್ರಚಾರಕ ಗೋಡೆ ಬರಹ ಮತ್ತು ಬ್ಯಾನರಗಳನ್ನು ತೆರವುಗೊಳಿಸುವ ಕಾರ್ಯವು ಇಂದು ಕೂಡ ಮುಂದುವರೆದಿದ್ದು ನಗರದ ವಿವಿದೆಡೆ ಇರುವ ಬ್ಯಾನರಗಳನ್ನು ತೆರವುಗೊಳಿಸಲಾಗುತ್ತಿದೆ. ನೀತಿ ಸಂಹಿತೆ ಜಾರಿಯಾಗಿ ಮೂರು ದಿನ ಕಳೆದರು ಇನ್ನೂ ತೆರವು ಕಾರ್ಯಗಳು ನಿರಂತರವಾಗಿದ್ದು ಇನ್ನೂ ಯಾವಾಗ ಮುಕ್ತಾಯವಾಗುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.