SHARE

ಬೆಳಗಾವಿ:ಬೆಳಗಾವಿಯ ಎರಡು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಭೆ ನಡೆಯಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಕೆಪಿಸಿಸಿ ಅದ್ಯಕ್ಷ ದಿನೇಶ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಯಲಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಹೋದರ ಪರವಾಗಿ ಟಿಕೇಟ್ ಲಾಭಿ ಇದ್ದರೆ, ಸಭೆಯಲ್ಲಿ ಅಭಿಪ್ರಾಯ ಹೇಳಲಿ. ಟಿಕೇಟ್ ಹಂಚಿಕೆಯಲ್ಲಿ ಅಲ್ಪ ಸ್ವಲ್ಪ ಭಿನ್ನಾಭಿಪ್ರಾಯಗಳು ಇರುತ್ತದೆ. ಆದರೆ ಕಾಂಗ್ರೆಸ್ ಹೈ ಕಮಾಂಡ ಗೆಲ್ಲುವ ಅಭ್ಯರ್ಥಿಗೇ ಟಿಕೇಟ್ ನೀಡಲಿದೆ ಎಂದರು. ಸಹೋದರನಿಗೆ ಟಿಕೆಟ್ ಕೊಡಿಸಬಾರದಂತ ಏನಿಲ್ಲ, ಗೆಲ್ಲೋ ಅಭ್ಯರ್ಥಿಗಳಿಗೇ ಟಿಕೆಟ್ ಕೊಡುವುದು ಹೈಕಮಾಂಡ ನಿರ್ದಾರವಷ್ಟೇ. ಲಾಬಿ ಮಾಡೋದು ಕಾಂಗ್ರೆಸ್ ನಲ್ಲಿ ಹೊಸದೇನಲ್ಲ, ಯಾರೆ ನಿಂತರೂ ಜಿಲ್ಲಾ ನಾಯಕರು ಸೇರಿ ಸಪೋರ್ಟ ಮಾಡುತ್ತೆವೆ ಎಂದರು. ಚನ್ನರಾಜ ಹಟ್ಟಿಹೊಳಿ ಅವರ ಹೆಸರೂ ಇದೆ, ಎರಡ್ಮೂರು ದಿನದಲ್ಲಿ ಎರಡು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಹಿರಂಗವಾಗಲಿದೆ. ಸಭೆಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಕೂಡಾ ಭಾಗಿಯಾಗಲಿದ್ದಾರೆ ಎಂದರು.