SHARE

ಬೆಳಗಾವಿ: ಲೋಕಸಭಾ ಸ್ಪರ್ಧೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದ್ದು, ಹಾಲಿ ಸಂಸದ ಸುರೇಶ ಅಂಗಡಿ ಭಾರಿ ಜನಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಮುನ್ನಾ ದಿನ ಬುಧವಾರದವರೆಗೆ ಒಟ್ಟು 33ನಾಮಪತ್ರ ಸಲ್ಲಿಕೆಯಾಗಿದ್ದು, 26 ಅಭ್ಯರ್ಥಿಗಳು ಬುಧವಾರ ಸಂಜೆವರೆಗೆ ಕಣಕ್ಕಿಳಿದಂತಾಗಿದೆ. ಕಾಂಗ್ರೆಸ್- ಬಿಜೆಪಿ, ಪ್ರಜಾಕೀಯ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 33 ನಾಮಪತ್ರಗಳು ಸ್ವೀಕೃತವಾದರೆ, ಕಣದಲ್ಲಿ 26 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.