SHARE

ಖಾನಾಪೂರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರಿಂದ ದಿನಾಂಕ 09.04.2019ರಂದು ಮಂಜೂರಾದ ರೂ. 2,00,000/- ಮೊತ್ತದ ಚೆಕ್ ಅನ್ನು ತೊರಾಳಿ ಗ್ರಾಮದಲ್ಲಿ ಶ್ರೀ ಸಾತೇರಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನೀಡಿದರು.

ತಾಲೂಕಿನ ಕಣಕುಂಬಿ ವಲಯದ ತೊರಾಳಿ ಗ್ರಾಮದಲ್ಲಿ ಶ್ರೀ ಸಾತೇರಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹೈದ್ರಾಬಾದ್ ಕರ್ನಾಟಕ ಹಾಗೂ ಧಾರವಾಡ ಪ್ರಾದೇಶಿಕ ಕಛೇರಿಯ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಗಂಗಾಧರ್ ರೈ ಹಾಗೂ ಜಿಲ್ಲಾ ನಿರ್ದೇಶಕರಾದ ಶೀನಪ್ಪ ಎಂ. ತಾಲೂಕು ಯೋಜನಾಧಿಕಾರಿಗಳಾದ ರಿಯಾಜ್ ಅತ್ತಾರರವರು ವಿತರಿಸಿದರು.

ಈ ಸಂಧರ್ಭದಲ್ಲಿ ದೇವಸ್ಥಾನ ಕಮಿಟೀಯ ಅಧ್ಯಕ್ಷರಾದ ಗೆನಪ್ಪಾ ಕಾಚು ಪಾಟೀಲ, ಪುಂಡಲೀಕ ವಾಸುದೇವ ಪಾಟೀಲ ಗ್ರಾಮ ಪಂಚಾಯತ್ ಸದಸ್ಯರು, ದೇವಸ್ಥಾನ ಕಮೀಟಿಯ ಸದಸ್ಯರಾದ ಪುಂಡಲೀಕ ಪಾಟೀಲ, ನಾರಾಯಣ ಪಾಟೀಲ, ನಾಗೂ ಪಾಟೀಲ, ತುಕಾರಾಮ ಕಾಂಬಳೆ, ಸುಭಾಷ ಪಾಟೀಲ, ಕೃಷ್ಣಾ ಪಾಟೀಲ, ಗುಂಡು ಪಾಟೀಲ ಹಾಗೂ ಮೇಲ್ವಿಚಾರಕರಾದ ದೇಮಣ್ಣಾ ನೇಸ್ರೆಕರ, ಸೇವಾ ಪ್ರತಿನಿಧಿ ಲಕ್ಷ್ಮಣ ಮತ್ತು ಸಂಘದ ಸದಸ್ಯರÀ ಉಪಸ್ಥಿತಿಯಲ್ಲಿ ಡಿ.ಡಿ. ವಿತರಣೆ ಮಾಡಲಾಯಿತು. ದೇವಸ್ಥಾನ ಸಮಿತಿಯವರು ಹಾಗೂ ಗ್ರಾಮದ ಜನರು ಪೂಜ್ಯರಿಗೆ ವಂದನೆಗಳನ್ನು ಸಲ್ಲಿಸಿದರು.