SHARE

ಬೆಳಗಾವಿ: ಚುನಾವಣಾ ಪ್ರಚಾರಕ್ಕಾಗಿ ಚಿತ್ರನಟಿ ತಾರಾ ಹಾಗೂ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಜಿಲ್ಲೆಗೆ ಆಗಮಿಸುತ್ತಿದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಬಿಜೆಪಿ ವಕ್ತಾರ ಈರಣ್ಣ ಕಡಾಡಿ ವಿಶ್ವನಾಯಕ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಆಗಲಿದ್ದಾರೆ. ದೇಶದೆಲ್ಲೆಡೆ ಜನಬೆಂಬಲ ಹೆಚ್ಚಾಗುತ್ತಿದೆ ಎಂದರು.

ಏ. 18ಕ್ಕೆ ಚಿಕ್ಕೋಡಿಯ ಬಸವಪ್ರಭು ಕೋರೆ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಅಂದು ಬಾಗಲಕೋಟೆಯಿಂದ ನೇರವಾಗಿ ಚಿಕ್ಕೋಡಿಗೆ ಮಧ್ಯಾಹ್ನ 3ಕ್ಕೆ ಮಾತನಾಡಲಿದ್ದಾರೆ ಎಂದು ಎಂಎಲ್ಸಿ ಮಹಾಂತೇಷ ಕವಟಗಿಮಠ ತಿಳಿಸಿದರು. ಯಮಕನಮರಡಿ ಕ್ಷೇತ್ರದಲ್ಲಿ ಮಾರುತಿ ಅಷ್ಟಗಿ ನೇತೃತ್ವದಲ್ಲಿ ಬರುವ ಚುನಾವಣೆಯಲ್ಲಿ ಜಯಭೇರಿ ಭಾರಿಸಲಿದೆ. ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ವರಿಷ್ಠರು ಪ್ರಚಾರ ಮಾಡದ ಬಗ್ಗೆ ಕೇಳಲಾದ ಪ್ರಶ್ನೆಗೆ ನಿರುತ್ತರರಾದರು. ಎಂ. ಬಿ. ಝಿರಲಿ, ಬಸವರಾಜ ರೊಟ್ಟಿ, ಶಾಸಕ ಅನಿಲ ಬೆನಕೆ, ರಾಜೇಂದ್ರ ಹರಕುಣಿ ಇತರರು ಉಪಸ್ಥಿತರಿದ್ದರು.