SHARE

ಬೆಳಗಾವಿ: ರಾಜ್ಯ ಸರಕಾರವು ಚುನಾವಣೆಯನ್ನು ಕೇವಲ ಒಂದು ಜಿಲ್ಲೆಗೆ ಸೀಮಿತಗೊಳಿಸಿದೆ ಇದನ್ನು ನೋಡಿದರೆ ಚುನಾವಣೆ ದೇಶದಲ್ಲಿದೆಯೋ ಅಥವಾ ರಾಜ್ಯದಲ್ಲಿದೆಯೋ ಎಂಬ ಗೊಂದಲ ಮೂಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ತಾರಾ ಸಮ್ಮಿಶ್ರ ಸರಕಾರಕ್ಕೆ ಟಾಂಗ್ ನೀಡಿದ್ದಾರೆ.
ಇಂದು ಬೆಳಗಾವಿಗೆ ಬೇಟಿ ನೀಡಿದ ಚಿತ್ರನಟಿ ತಾರಾ ಮಾಧ್ಯಮಗಳೊಂದಿಗೆ ಮಾತನಾಡಿ ಚುನಾವಣೆಯಲ್ಲಿ ಪ್ರಚಾರ ಮಾಡುವುದು ಸಾಮಾನ್ಯ ಪಕ್ಷಗಳು ಏನಾದರು ತಪ್ಪು ಮಾಡಿದ್ದರೆ ಅದರ ಬಗ್ಗೆ ನೇರವಾಗಿ ಮಾತನಾಡಬೇಕು. ಮಾತಿನಲ್ಲಿ ಪದ ಬಳಕೆ ಸರಿಯಾಗಿ ಇರಬೇಕು, ಪ್ರಚಾರದ ಅಬ್ಬರದಲ್ಲಿ ವೈಯಕ್ತಿಕ ಟೀಕೆ ಮತ್ತು ಅನುಚಿತ ವರ್ತನೆ ಮಾಡಬಾರದು ಎಂದರು. ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ. ಕಳೆದು ಐದು ವರ್ಷಗಳಲ್ಲಿ ಉತ್ತಮ ಕಾರ್ಯಮಾಡಿದ್ದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಅನ್ನುವುದು ಜನರ ಅಭಿಲಾಷೆಯಾಗಿದೆ.

ಬೆಳಗಾವಿಯಲ್ಲಿ ಸುರೇಶ ಅಂಗಡಿ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದು ಅವರ ಗೆಲುವು ಖಚಿತ ಎಂದರು. ಇನ್ನೂ ಮಾಧ್ಯಮದವರು ನಿಖಿಲ್ ಎಲ್ಲಿದಿಯಪ್ಪಾ ಎಂಬ ಚಿತ್ರವೊಂದು ನಿರ್ಮಾಣವಾದರೆ ನಟಿಸುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿ ಒಳ್ಳೆಯ ಪಾತ್ರ ದೊರೆತರೆ ಖಂಡಿತಾ ನಟಿಸುತ್ತೇನೆ. ಚಿತ್ರವನ್ನು ಯಾರು ಮಾಡುತ್ತಾರೆ ಅನ್ನುವುದು ಮುಖ್ಯವಲ್ಲ ಚಿತ್ರದ ಕತೆ ಮುಖ್ಯ. ನಿಖೀಲ್ ನಾಯಕನಾದರೂ ಆತನೊಂದಿಗೆ ನಟಿಸಲು ಸಿದ್ದ ಎಂದರು.