SHARE

ಬೆಳಗಾವಿ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಆಧಾರದಲ್ಲಿ ಕೇಂದ್ರ ಸರಕಾರದ ಕಾರ್ಯವೈಖರಿ ನಡೆಯುವದರ ಜೊತೆಗೆ ಅವರ ಆಶಯದ ಭಾರತ ನಿರ್ಮಾಣಕ್ಕೆ ಮೋದಿ ಸರಕಾರ ಕಳೆದ ಐದು ವರ್ಷದಲ್ಲಿ ದುಡಿದಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ ಹೀರಾಮನಿ ಕಾಂಗ್ರೆಸ್ ಸರಕಾರದ 70 ವರ್ಷದ ಆಡಳಿತ ನಡೆಸಿದರೂ ಇನ್ನೂ ‘ಗರೀಬಿ ಹಠಾವೊ’ ದಲ್ಲೇ ನಡೆದಿದೆ ಎಂದು ಟೀಕಿಸಿದರು. ಡಾ. ಅಂಬೇಡ್ಕರ್ ದೆಹಲಿಯಲ್ಲಿ ತಂಗಿದ್ದ ಅವರ ಮನೆಯನ್ನು ‘ಡಾ. ಬಿ. ಆರ್. ಅಂಬೇಡ್ಕರ್ ಸ್ಟಡಿ ಸೆಂಟರ್’ ಪ್ರಧಾನಿ ಮೋದಿ ಸರಕಾರ ದಲಿತರ ಶಿಕ್ಷಣಕ್ಕೆ ನಿರ್ಮಿಸಿದೆ. ಆದರೆ ಬಿಜೆಪಿಗೆ ದಲಿತ ವಿರೋಧಿ, ಸಂವಿಧಾನ ಬದಲಾವಣೆಗೆ ಯತ್ನಿಸುತ್ತಿದ್ದಾರೆ ಎಂಬ ಹಣೆಬರಹ ಪ್ರತಿಪಕ್ಷ ಕಾಂಗ್ರೆಸ್ ಕಟ್ಟಲು ಯತ್ನಿಸುತ್ತಿದೆ ಎಂದು ಜಗದೀಶ್ ಹಿರಾಮನಿ ಅಸಮಧಾನ ವ್ಯಕ್ತಪಡಿಸಿದರು.

ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ನಿಧನದ ಸಮಯ ಇದೇ ಕಾಂಗ್ರೆಸ್ ಸರಕಾರ ದೆಹಲಿಯಲ್ಲಿ ಆರು-ಮೂರು ಅಡಿ ಜಾಗ ಅವರಿಗೆ ನೀಡಲಿಲ್ಲ. ಕೊನೆಗೆ ಮುಂಬಯಿಯಲ್ಲಿ ಅವರ ಅಂತ್ಯಸಂಸ್ಕಾರ ನಡೆಯಿತು ಎಂದು ಆರೋಪಿಸಿದರು. ನವ್ಹೆಂಬರ್ 26 ನ್ನು ಸಂವಿಧಾನದ ದಿನವನ್ನಾಗಿ ಮೋದಿ ಸರಕಾರ ಜಾರಿಗೆ ತಂದಿದೆ. ಪಂಚ ಯೋಜನೆಗಳನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರ ಸಂಬಂಧ ಪ್ರಧಾನಿ ಮೋದಿ ಮಾಡಿದ್ದಾರೆ. ಆಯ್ದ ೧೦೦ ದಲಿತ ವಿದ್ಯಾರ್ಥಿಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರತಿವರ್ಷ ಲಂಡನಗೆ ಕಳಿಸಲಾಗುತ್ತಿದೆ. ಮಹಾರಾಷ್ಟ್ರದ ನಾಗಪುರ ನಗರದ ಅಭಿವೃದ್ಧಿ ಕೇಂದ್ರ ಸರಕಾರ ಕೈಗೆತ್ತಿಕೊಂಡಿದೆ ಎಂದರು. ಕಾಂಗ್ರೆಸ್ ಡಾ. ಅಂಬೇಡ್ಕರ್ ಅವರ ವಿಚಾರ ಧಾರೆಗಳನ್ನು ಮತ ಬ್ಯಾಂಕಗೆ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ನಿರಾಧಾರ. ಬಿಜೆಪಿ ಸರಕಾರ ಸಂವಿಧಾನ ಬದಲಾವಣೆ ಮಾಡುವ ಯಾವುದೇ ಉದ್ದೇಶ ಹೊಂದಿಲ್ಲ. ಖರ್ಗೆ ಅವರು ದೇಶವಾಸಿಗಳ ದಿಕ್ಕು ತಪ್ಪಿಸಬಾರದು ಎಂದು ಎಚ್ಚರಿಸಿದರು.

ಪಂಚತಂತ್ರ ಬಿಡುಗಡೆ: ಡಾ. ಬಾಬಾಸಾಹೇಬರ ಕುರಿತು ಹೊರಡಿಸಲಾದ ಪಂಚತಂತ್ರ ಎಂಬ ಮಾಹಿತಿ ಬ್ರೌಶರ್ಸ್ ಬಿಡುಗಡೆಗೊಳಿಸಿದರು. ಅನಿಲ ಬೆನಕೆ, ಹನಮಂತ ಪುಂಗಾಲೆ, ರಾಜು ಚಿಕ್ಜನಗೌಡ್ರ, ಬಸವರಾಜ ರೊಟ್ಟಿ ಇತರರು ಉಪಸ್ಥಿತರಿದ್ದರು.