SHARE

ಬೆಳಗಾವಿ: ಕಣಕುಂಬಿ ರಸ್ತೆಯಲ್ಲಿ ತಾಯಿಯೊಂದಿಗೆ ರಸ್ತೆ ದಾಟುತ್ತಿದ್ದ ಚಿರತೆ ಮರಿಗೆ ತಡರಾತ್ರಿ ವಾಹನ ಬಡಿದು ಅಸುನೀಗಿದೆ. ಕಣಕುಂಬಿ ರಸ್ತೆಯ ಅರಣ್ಯ ನರ್ಸರಿ ಮತ್ತು ಡೆಲ್ಟಾ ರೆಸಾರ್ಟ್ ಮಧ್ಯದ ರಸ್ತೆಯಲ್ಲಿ ತಾಯಿಯೊಂದಿಗೆ ಹೊರಟಿದ್ದ 6ತಿಂಗಳ ಮರಿಗೆ ತಡರಾತ್ರಿ ಅಪರಿಚಿತ ವೇಗದ ವಾಹನ ಢಿಕ್ಕಿ ಹೊಡೆದಿದೆ. ತಾಯಿ ಚಿರತೆ ರಸ್ತೆಯ ಇನ್ನೊಂದು ಬದಿಗೆ ಯಶಸ್ವಿಯಾಗಿ ದಾಟಿದ್ದು, ಮರಿ ಅಸುನೀಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ವನ್ಯಜೀವಿ ವಲಯದ ರಸ್ತೆಯಲ್ಲಿ ಬಹಳ ಸಂಯಮದಿಂದ ಚಾಲಕರು ವಾಹನ ಚಲಾಯಿಸಬೇಕು‌ ಈ ಬಗ್ಗೆ ನೊಟಿಸ್ ಬೋರ್ಡಗಳನ್ನು ಅಳವಡಿಸಲಾಗಿದ್ದರೂ ಸಾರ್ವಜನಿಕರು ಅರಿತುಕೊಳ್ಳುತ್ತಿಲ್ಲ ಎಂದು ಅರಣ್ಯಾಧಿಕಾರಿಗಳು ಅಸಮಧಾನ ವ್ಯಕ್ತಪಡಿಸಿದರು.
ಎಸಿಎಫ್ ಸಿ. ಬಿ. ಪಾಟೀಲ, ಆರ್ ಎಫ್ ಓ ಎಂ. ಬಿ. ಕುಸನಾಳ ಪರಿಶೀಲನೆ ನಡೆಸಿ ಪ್ರಾಣಿಮರಿಯ ಅಂತ್ಯಕ್ರಿಯೆ ನಡೆಸಲಾಯಿತು.