SHARE

ಬೆಳಗಾವಿ: ಪ್ರವಾಹಪೀಡಿತ ಜನರ ರಕ್ಷಣೆಗೆ ಕಾಂಗ್ರೆಸ್ ಮುಂದಾಗಿದ್ದು, ಅರಭಾವಿ ಮತಕ್ಷೇತ್ರದಲ್ಲಿ ಅರವಿಂದ ದಳವಾಯಿ ನೇತೃತ್ವದಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾಳು, ಹಾಸಿಗೆ-ಹೊದಿಕೆ, ಔಷಧಿ ಸೋಪು, ಬಿಸ್ಕೀಟ್ ವಿತರಿಸುವ ಮೂಲಕ ಸಂತ್ರಸ್ತ ಜನತೆಗೆ ಸ್ವಖರ್ಚಿನಿಂದ ಊಟ ಉಣಬಡಿಸಲಾಯಿತು.

ಢವಳೇಶ್ವರ, ಪಿ. ಜಿ. ಹುಣಶ್ಯಾಳ, ಕೌಜಲಗಿ, ಗೋಕಾಕ, ಕುಲಗೋಡ ಸೇರಿ ಇತರ ಗ್ರಾಮಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಾಯಿತು. ಮನೆಮಠ ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿರುವ ಜನತೆಗೆ ಆತ್ಮಸ್ಥೈರ್ಯ ತುಂಬಲಾಗಿದೆ, ಸಾಮೂಹಿಕವಾಗಿ ಸಹಾಯ ಕ್ರೂಢೀಕರಿಸಿ ನೆರವು ನೀಡುವ ಯೋಚನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ತಿಳಿಸಿದ್ದಾರೆ. ಬೆಂಗಳೂರು ಭಾಗದ ಎಲ್ಲ ಜಿಲ್ಲೆಗಳಿಂದ ಜನತೆ ನೂರಾರು ಲಾರಿಯಷ್ಟು ಸಹಾಯ ಸಾಮಗ್ರಿ ತರುತ್ತಿರುವುದು ಭಾವನಾತ್ಮಕ ಅಭಿಮಾನ ಸೃಷ್ಟಿಸಿದೆ ಎಂದರು.