SHARE

ಬೆಳಗಾವಿ: ಶಾಂತತೆಗೆ ಭಂಗ ತಂದು ಗಡಿ ಖ್ಯಾತೆ ಹಬ್ಬಿಸಿರುವ ಮಹಾರಾಷ್ಟ್ರ ಶಿವಸೇನೆ ನೇತೃತ್ವದ ಸರಕಾರ ಕರ್ನಾಟಕ-ಮಹಾರಾಷ್ಟ್ರ ನಡುವೆ ಅಶಾಂತಿ ಹುಟ್ಟು ಹಾಕಿದೆ. ಭಾನುವಾರ ನಿಪ್ಪಾಣಿ ಮತ್ತು ಕುಗನೊಳ್ಳಿ ಅಂತಾರಾಜ್ಯ ಚೆಕ್ ಪೋಸ್ಟ್ ಬಳಿ ಬೆಳಗಾವಿ ಪೊಲೀಸರು ಬಿಗಿಬಂದೋಬಸ್ತ್ ಮಾಡಿದರು. ಮಹಾರಾಷ್ಟ್ರ ಸೇರುವ ಎಲ್ಲ ಬಸಗಳು ನಿಪ್ಪಾಣಿವರೆಗೆ ಮಾತ್ರ ಚಲಿಸಿದ್ದರಿಂದ ಪ್ರಯಾಣಿಕರು ಯಾತನೆ ಅನುಭವಿಸಿದ್ದಾರೆ.

ಚಂದಗಡ ಎನ್ ಸಿಪಿ ಶಾಸಕ ರಾಜೇಶ ಪಾಟೀಲ ಭಾನುವಾರ ಸಂಜೆ ಪುಂಡ ಎಂಇಎಸ್ ನಿಂದ ಬೆಳಗಾವಿ ಟಿಳಕವಾಡಿ ಪ್ರದೇಶದಲ್ಲಿ ಸನ್ಮಾನ ಸ್ವೀಕರಿಸಿ ಖ್ಯಾತೆಗೆ ತುಪ್ಪ ಸುರಿದರು. ಮರಾಠಿಗರ ಪ್ರತಿನಿಧಿಯಾಗಿ ನಾನು ಕೆಲಸ ಮಾಡುತ್ತೇನೆ ಎಂಬ ಹೇಳಿಕೆ ನೀಡಿದ ಶಾಸಕ ರಾಜೇಶ ಪಾಟೀಲ ಕನ್ನಡ ಸಂಘಟನೆಗಳ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಗಡಿ ಸಮಸ್ಯೆ ಇತ್ಯರ್ಥವಾದರೆ ಬೆಳಗಾವಿಯಿಂದ ಸ್ಪರ್ಧಿಸಿ ಮಹಾರಾಷ್ಟ್ರ ಶಾಸನಕ್ಕೆ ಆಯ್ಕೆ ಆಗುವುದಾಗಿ ರಾಜೇಶ ಬಾಲೀಶ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ.

ಸದ್ಯ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಬೂದಿ ಮುಚ್ಚಿದ ಜೆಂಡದಂತುರುವ ಪರಿಸ್ಥಿತಿ ಶ್ರೀಸಾಮಾನ್ಯರ ಜನಜೀವನಕ್ಕೆ ಅಲ್ಪ ತಿಂದರೆ ಉಂಟು ಮಾಡಿದೆ. ಬೆಳಗಾವಿ ಪೊಲೀಸರು ಎಂಇಎಸ್ ನಾಯಕರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಅಗತ್ಯ ಬಿದ್ದರೆ ತೀಕ್ಷ್ಣ ಪ್ರತಿಕ್ರಿಯೆ ನೀಡಲು ಸಿದ್ದರಾಗಿದ್ದಾರೆ. ಬೆಳಗಾವಿ ಐಜಿಪಿ ರಾಘವೇಂದ್ರ ಸುಹಾಸ ಕೊಲ್ಲಾಪುರ ವಲಯ ಐಜಿಪಿ ಅವರೊಂದಿಗೆ ಪರಸ್ಪರ ಅಗತ್ಯ ಶಾಂತಿ ಕಾಪಾಡುವ ನಿಟ್ಟಿನ ಕ್ರಮಗಳ ಬಗ್ಗೆ ಚರ್ಚಿಸಿದರು. ಬೆಳಗಾವಿ ಜಿಲ್ಲಾಡಳಿತ ಅಗತ್ಯ ಮುನ್ನಚ್ಚರಿಕೆ ವಹಿಸಿದ್ದು ಗಡಿತಂಟೆ ಹೆಸರಲ್ಲಿ ಯಾರೂ ಅನಗತ್ಯ ಗೊಂದಲ & ಅಶಾಂತಿ ಸೃಷ್ಟಿಸಬಾರದು ಎಂದು ಎಚ್ಚರಿಸಿದೆ.