SHARE

ಬೆಳಗಾವಿ: ಬೈಲಹೊಂಗಲ ತಾಲೂಕು ದೊಡ್ಡವಾಡ ಜ.18ರ ತ್ರಿವಳಿ ಕೊಲೆ ಪ್ರಕರಣದ ನಾಲ್ವರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ್ದ ಮುಖ್ಯ ಆರೋಪಿ ಶಿವಪ್ಪ ಬಸಪ್ಪ ಭಗವಂತನವರ ಹಾಗೂ ಸಂಚು ರೂಪಿಸಲು ಅನುವಾಗಿದ್ದ ಗೋವಿಂದ ಶಿ. ಸಂಗೊಳ್ಳಿ, ಬಸವಂತಪ್ಪ ಅಂದಾನಶೆಟ್ಟಿ(೩೮) ಮಲ್ಲಿಕಾರ್ಜುನ ಅಂದಾನಶೆಟ್ಟಿ(೩೫) ಅವರನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಪೊಲೀಸ್ ವರಿಷ್ಠ ಲಕ್ಷ್ಮಣ ನಿಂಬರಗಿ ರಾಜ್ಯಾದ್ಯಂತ ಗಮನ ಸೆಳೆದಿದ್ದ ಕೊಲೆ ಪ್ರಕರಣದ ಮುಖ್ಯ ಆರೋಪಿತ ಹಾಗೂ ಸಂಚುಕೋರ ಸಹಚರರನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಯುತ್ತದೆ ಎಂದರು. ತ್ರಿವಳಿ ಕೊಲೆಯಿಂದ ಸಮಾಜದಲ್ಲಿ ಉಂಟಾಗಿದ್ದ ಭಯ ನೀಗಿಸುವಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆ ಇಂದು ಬಂಧನದ ಮೂಲಕ ತಹಬದಿಗೆ ಬಂದಿದೆ ಎಂದರು. ಹೆಚ್ಚುವರಿ ಎಸ್ಪಿ ಅಮರನಾಥರೆಡ್ಡಿ, ಬೈಲಹೊಂಗಲ ಎಎಸ್ಪಿ ಉಪಸ್ಥಿತರಿದ್ದರು.